ಉತ್ತರ ಕನ್ನಡ: ಅಂತ್ಯಸಂಸ್ಕಾರಕ್ಕಾಗಿ ರಾಜ್ಯ ಸರ್ಕಾರದಿಂದ ತುರ್ತು ನಿಧಿ ಬಿಡುಗಡೆ

Jul 13, 2021, 5:57 PM IST

ಕಾರವಾರ (ಜು. 13): ರಾಜ್ಯ ಸರ್ಕಾರದ ಅಂತ್ಯಸಂಸ್ಕಾರ ಯೋಜನೆಯಡಿ ಫಲಾನುಭವಿಗಳಿಗೆ ವಿತರಣೆಗಾಗಿ ಕಳೆದ 5 ವರ್ಷಗಳ ಬಳಿಕ ಉತ್ತರಕನ್ನಡ ಜಿಲ್ಲೆಗೆ ಸರಕಾರ 3.02 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ಬಾಕಿ ಇದ್ದ 5272 ಅರ್ಜಿದಾರರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಇದೀಗ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಇನ್ನೊಂದು ವಾರದಲ್ಲಿ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮೂರ್ನಾಲ್ಕು ತಿಂಗಳಿಂದ ಮೀನುಗಾರರಿಗಿಲ್ಲ ಸಬ್ಸಿಡಿ, ಇನ್ಮುಂದೆ ಕರರಹಿತ ಡಿಸೇಲ್

ಸರ್ಕಾರ 2008ರಲ್ಲಿ ಅಂತ್ಯಸಂಸ್ಕಾರ ನಿಧಿ ಯೋಜನೆ ಪ್ರಾರಂಭಿಸಿತ್ತು. ಬಿಪಿಎಲ್ ಕುಟುಂಬದವರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರದ ಖರ್ಚಾಗಿ ಸರ್ಕಾರದಿಂದ ತಲಾ 1 ಸಾವಿರ ರೂ.ಗಳನ್ನು ಸಂಬಂಧಿಕರಿಗೆ ತುರ್ತಾಗಿ ನೀಡುವ ಯೋಜನೆ ಇದಾಗಿತ್ತು. ನಂತರ ಈ ಅಂತ್ಯಸಂಸ್ಕಾರ ನಿಧಿಯನ್ನು 5 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.