Jul 8, 2020, 5:55 PM IST
ಮಂಡ್ಯ(ಜು.08): ಕೊರೋನಾ ಸೋಂಕಿತರ ಅಂತ್ಯ ಸಂಸ್ಕಾರದ ವಿಚಾರ ಪದೇ ಪದೇ ಸದ್ದು ಮಾಡುತ್ತಿದೆ. ಸೋಂಕಿತ ಮೃತದೇಹವನ್ನು ಕ್ರಮಬದ್ಧವಾಗಿ ನಡೆಸಿ ಎಂದು ಸರ್ಕಾರ ಹಾಗೂ ಮಾಧ್ಯಮಗಳು ಎಚ್ಚರಿಸುತ್ತಿದ್ದರೂ ಮತ್ತದೇ ಯಡವಟ್ಟು ಮರುಕಳಿಸಿದೆ.
ಹೌದು, ಈ ಬಾರಿ ಮಂಡ್ಯ ಜಿಲ್ಲಾಡಳಿತ ಅಂತಹದ್ದೊಂದು ತಪ್ಪನ್ನು ಮಾಡಿದೆ. ಊರಿನ ಸಮೀಪ ಸೋಂಕಿತರ ಅಂತ್ಯಕ್ರಿಯೆ ಮಾಡಬಾರದು ಎನ್ನುವ ನಿಯಮವಿದ್ದರೂ, ಆಶ್ರಯ ಮನೆಗಳಿರುವ ಸಮೀಪದಲ್ಲೇ ಸೋಂಕಿತ ಶವದ ಅಂತ್ಯಕ್ರಿಯೆ ಮಾಡಲಾಗಿದೆ.
ರಸ್ತೆ ಪಕ್ಕವೇ ಸೋಂಕಿತನ ಅಂತ್ಯಕ್ರಿಯೆ; ಪಿಪಿಇ ಕಿಟ್ ಅಲ್ಲಿಯೇ ಬಿಸಾಡಿ ಹೋದ ಸಿಬ್ಬಂದಿ
ಮಂಡ್ಯದ ಹೊರವಲಯದ ಯತ್ತಗದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲಾಡಳಿತದ ಕ್ರಮಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ