ಕರಗದ ಮೇಲೂ ಕರೋನಾ ಕರಿನೆರಳು; ಉತ್ಸವ ಆಚರಣೆ ಅನುಮಾನ

Mar 10, 2020, 8:09 PM IST

ಬೆಂಗಳೂರು[ಮಾ. 10]  ಬೆಂಗಳೂರು ಕರಗದ ಮೇಲೆಯೂ ಕರೋನಾ ವೖರಸ್ ಪರಿಣಾಮ ಬೀರಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಕರಗ ಆಚರಣೆ ಮಾಡಬೇಕೋ? ಬೇಡವೋ? ಎಂಬುದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಕರಗ ಉತ್ಸವ ಬೆಂಗೂಳೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡುತ್ತದೆ. ಬೆಂಗಳೂರು ಸೇರಿದಂತೆ ಸುತ್ತಲಿನ ಜನ ಕರಗಕ್ಕೆ ಭೇಟಿ ನೀಡುತ್ತಾರೆ.