Mar 19, 2020, 3:07 PM IST
ಬೆಂಗಳೂರು, (ಮಾ.19): ಡೆಡ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ರಾಜ್ಯದಲ್ಲಿ 15ಕ್ಕೆ ಏರಿದೆ. ಅದರಲ್ಲೂ ಬೆಂಗಳೂರಿನಲ್ಲೇ ಹೆಚ್ಚು. ಹೀಗಾಗಿ ಕೊರೋನಾ ಸೋಂಕು ಹರಡದಂತೆ ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸಿದ್ದು, ಮೊದಲಿಗೆ ಪಿಜೆಗಳ ಮೇಲೆ ನಿಗಾ ಇಟ್ಟಿದೆ.
ಕೊರೋನಾ ವೈರಸ್: ಮಾಧ್ಯಮಗಳು ಹೇಗೆ ಹೊಣೆ ನಿಭಾಯಿಸುತ್ತಿವೆ ಎನ್ನುವ ವಿವರಣೆ ಇಲ್ಲಿದೆ...!
ಬಿಬಿಎಂಪಿ ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಪಿ.ಜಿನಲ್ಲಿ ನೆಲೆಸಿದವರು ಅದೆಷ್ಟೋ ಜನರರಿದ್ದಾರೆ. ಬಿಬಿಎಂಪಿ ಆದೇಶದಂತೆ ಇವರೆಲ್ಲರು ಖಾಲಿ ಮಾಡಿದರೆ ಹೋಗುವುದೆಲ್ಲಿಗೆ? ರಾಜ್ಯದ ಹಳ್ಳಿಗಳು ಸದ್ಯಕ್ಕೆ ಸೇಫ್.
ಅಕಸ್ಮಾತ್ ಒಂದಿಬ್ಬರು ಸೋಂಕಿತರು ಊರಿಗೆ ಹೋದರೂ ಭಯ ಅಲ್ವಾ? ಬದಲಿಗೆ ಪಿಜಿಯೊಳಗೇ ಕಾರ್ಯ ನಿರ್ವಹಿಸುವ ಹಾಗೂ ನೈರ್ಮಲ್ಯ ಕಾಪಾಡುವಂತೆ ಸೂಚಿಸುವುದು ಒಳ್ಳೆಯದಲ್ಲವೇ?