Sep 30, 2019, 4:43 PM IST
ಬೆಂಗಳೂರು (ಸೆ.30): ರಾಜಕೀಯವೇ ಹಾಗೇ, ಯಾವಾಗ, ಯಾರು, ಏನು ಮಾಡ್ತಾರೆ ಎಂದು ಹೇಳೋದೆ ಕಷ್ಟ. ವಿಧಾನಸೌಧದ ಮಟ್ಟಿಗೆ ದೋಸ್ತಿ ಮಾಡಿಕೊಂಡು, ಬೇರೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮತ್ತೆ ಮೈತ್ರಿ ಮುಂದುವರಿಸಲು ನಿರ್ಧರಿಸಿವೆ.
ಕಳೆದ ವಿಧಾನಸಭೆ ಚುನಾವಣೆ (2018) ಬಳಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್, ಸರ್ಕಾರ ಪತನವಾದ ಬಳಿಕ ಮೈತ್ರಿ ಮುರಿದುಕೊಂಡಿವೆ.
ಪರಸ್ಪರ ಹಳಸಿದ ಸಂಬಂಧಗಳು, ನಾಯಕ-ಕಾರ್ಯಕರ್ತರ ಒಳಗೊಳಗೆ ತಿಕ್ಕಾಟಗಳು, ಶಾಸಕರ ತಾರತಮ್ಯದ ಆರೋಪಗಳು.... ಹೀಗೆ ಬೇರೆ ಬೇರೆ ಕಾರಣಗಳಿಂದ ಮೈತ್ರಿಯಲ್ಲಿ ಬಿರುಕುಂಟಾಗಿತ್ತು. ಮುಂಬರುವ ಉಪ-ಚುನಾವಣೆಯಲ್ಲಿ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲಿವೆ.