ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಆಸ್ತಿ ಜಪ್ತಿಗೆ ಸಿಟಿ ಸಿವಿಲ್ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
ಬೆಂಗಳೂರಿನ ಮಂತ್ರಿ ಮಾಲ್ ಆಸ್ತಿ ಜಪ್ತಿ ಪ್ರಕ್ರಿಯೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಬಿಬಿಎಂಪಿ ಕೈಬಿಟ್ಟಿದೆ. ಬಿಬಿಎಂಪಿ ಜಪ್ತಿಗೆ ಬಂದಾಗ ಕೋರ್ಟ್ ಆದೇಶದ ಬಗ್ಗೆ ಮಾಹಿತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಚರಾಸ್ತಿಗಳನ್ನು ಹಿಂದಕ್ಕೆ ನೀಡಲಾಗಿದೆ. ಮಂತ್ರಿ ಮಾಲ್ ಕಳೆದ ಐದು ವರ್ಷಗಳಿಂದ ಪಾಲಿಕೆಗೆ ಸ್ಥಿರ ಆಸ್ತಿಯ ತೆರಿಗೆ ಕಟ್ಟದೇ ಕಳ್ಳಾಟ ನಡೆಸಿತ್ತು. ಈ ಹಿಂದೆ ಕೂಡ ತೆರಿಗೆ ಕಟ್ಟದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿತ್ತು. ಒಟ್ಟು 42 ಕೋಟಿ ರೂಪಾಯಿ ತೆರಿಗೆ ಬಾಕಿಯನ್ನು ಮಂತ್ರಿ ಮಾಲ್ ಉಳಿಸಿಕೊಂಡಿದೆ.