Dec 20, 2021, 11:36 AM IST
ಚಿತ್ರದುರ್ಗ (ಡಿ. 20): ಕಳೆದ 10 ವರ್ಷಗಳಿಂದ ತೀವ್ರ ಬರಕ್ಕೆ (Drought) ತುತ್ತಾಗಿ ನೀರಿನ ಆಹಾಕಾರ ಅನುಭವಿಸಿರೋ ಚಿತ್ರದುರ್ಗದ (Chitradurga) ನೀರಿನ ಸೆಲೆ ಎನಿಸಿರುವ ಇತಿಹಾಸ ಪ್ರಸಿದ್ಧ ವಾಣಿವಿಲಾಸಸಾಗರ (Vanivilas Sagar) ಜಲಾಶಯ ಈ ಬಾರಿ ತನ್ನ ನೀರಿನ ಮಟ್ಟ 125 ಅಡಿ ದಾಟಿದ್ದೂ,126 ಅಡಿಯತ್ತ ದಾಪುಗಾಲು ಹಾಕ್ತಿದೆ. ಹೀಗಾಗಿ ವಿವಿದೆಡೆಗಳಿಂದ ಪ್ರವಾಸಿಗರದಂಡೇ ವಿವಿಸಾಗರದತ್ತ ಧಾವಿಸುತ್ತಿದೆ.
Chitradurga: ರೈಲ್ವೇ ಬ್ರಿಡ್ಜ್ ಅವಾಂತರ, ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡಬೇಕು
ಇನ್ನು ಹೊಸದುರ್ಗ, ಹಿರಿಯೂರು ಹಾಗೂ ಚಿತ್ರದುರ್ಗ ಭಾಗದಲ್ಲಿ 800 ಅಡಿ ಬೋರ್ವೆಲ್ ಕೊರೆಸಿದರು ಒಂದು ಹನಿ ನೀರು ಸಿಗುತ್ತಿರಲಿಲ್ಲ. ಹೀಗಾಗಿ ಇಂತಹ ವೇಳೆ ವಾಣಿವಿಲಾಸ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಹೀಗಾಗಿ ಈ ಭಾಗದ ಅನ್ನದಾತರಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಅಲ್ಲದೇ ತುರ್ತಾಗಿ ಕಾಲುವೆಗಳ ಮೂಲಕ ನೀರುಹರಿಸಿ ಈಭಾಗದಲ್ಲಿ ಈ ಹಿಂದೆ ಬೆಳೆಯುತಿದ್ದ ಕಬ್ಬು ಹಾಗು ಭತ್ತ ಬೆಳೆಯಲು ಮತ್ತೆ ಸರ್ಕಾರ ಪ್ರೋತ್ಸಾಹಿಸುವಂತೆ ರೈತರು ಮನವಿ ಮಾಡಿದ್ದಾರೆ.