Dec 12, 2021, 4:51 PM IST
ಚಿತ್ರದುರ್ಗ (ಡಿ. 12): ಇದೊಂದು ರೈಲ್ವೇ ಬ್ರಿಡ್ಜ್ (Railway Bridge) ನಿರ್ಮಾಣವಾದರೆ ನೂರಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಲಿದೆ ಎಂಬ ಭರವಸೆ ಇತ್ತು. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆ ಬ್ರಿಡ್ಜ್ ಕೆಳಗೆ ವಿದ್ಯಾರ್ಥಿಗಳು ಹಾಗು ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಕೋಟೆನಾಡು ಚಿತ್ರದುರ್ಗದ (Chitradurga) ಗೋನೂರು ರಸ್ತೆಯಲ್ಲಿನ ರೈಲ್ವೆ ಬ್ರಿಡ್ಜ್ ಕಥೆ ಇದು.
Flood Victims : ನಿರಾಶ್ರಿತರಿಗೆ ಮನೆಯೇನೋ ಸಿಕ್ತು, ಮೂಲ ಸೌಕರ್ಯವಿಲ್ಲದೇ ಗೋಳು ಹೇಳತೀರದು!
ಕಳೆದ 15 ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದಾಗಿ ಈ ಬ್ರಿಡ್ಜ್ ನೊಳಗೆ ನೀರು ಭರ್ತಿಯಾಗಿದೆ. ಹೀಗಾಗಿ ಬ್ರಿಡ್ಜ್ ಇದ್ದರು ಸಹ ಮಳೆನೀರಿನಿಂದಾಗಿ ರಸ್ತೆ ಬಂದ್ ಆಗಿದೆ. ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಬರಲು ಹಿಂದೇಟು ಹಾಕುವಂತಾಗಿದೆ. ಆದ್ರೆ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆಂದು ಸ್ಥಳಿಯರು ಆರೋಪಿಸಿದ್ದೂ, ನಿರ್ಲಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಇನ್ನಾದ್ರು ಈ ಬ್ರಿಡ್ಜ್ ನಿಂದಾಗಿ ಎದುರಾಗಿರೋ ಸಮಸ್ಯೆಗೆ ಪರಿಹಾರ ಹುಡುಕುತ್ತಾರಾ ಎಂದು ಕಾದು ನೋಡಬೇಕಿದೆ.