May 13, 2020, 3:07 PM IST
ಬೆಂಗಳೂರು(ಮೇ.13): ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಬಟ್ಟೆ ಅಂಗಡಿ ಓಪನ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಬಿಬಿಎಂಪಿ ಕಲಾಸಿಪಾಳ್ಯ ಕಾರ್ಪೋರೇಟರ್ ಅವರ ಪತಿಗೆ ಸಗಣಿಯಿಂದ ಹಲ್ಲೆ ಮಾಡಿದ ಘಟನೆ ಇಂದು(ಬುಧವಾರ) ನಡೆದಿದೆ. ಬಟ್ಟೆ ಅಂಗಡಿ ತೆರೆದಿದ್ದನ್ನ ಪ್ರಶ್ನಸಿದ ಕಾರ್ಪೋರೇಟರ್ ಪ್ರತಿಭಾ ಅವರ ಪತಿ ಧನರಾಜ್ ಮೇಲೆ ಸಗಣಿ ಪೊಟ್ಟಣ ಕಟ್ಟಿ ಎಸೆಯಲಾಗಿದೆ.
ವಿದೇಶದಿಂದ ಮರಳಿದ ಕನ್ನಡಿಗರು: ಏರ್‌ಲಿಫ್ಟ್ ಮೂಲಕ ತಾಯ್ನಾಡಿಗೆ ಆಗಮನ
ಸಗಣಿಯಿಂದ ಹಲ್ಲೆಯನ್ನ ಖಂಡಿಸಿದ ಧನರಾಜ್ ಅವರು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಧನರಾಜ್ ಧರಣಿಗೆ ಸ್ಥಳೀಯರೂ ಕೂಡ ಸಾಥ್ ನೀಡಿದ್ದಾರೆ. ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಇವರ ವಾಕ್ಸಮರ ಕೈ ಕೈ ಮಿಲಾಯಿಸೋ ಹಂತಕ್ಕೂ ಕೂಡ ತಲುಪಿತ್ತು.