Nov 11, 2022, 7:14 PM IST
ಮಂಡ್ಯ (ನ. 11): ಮಂಡ್ಯದ (Mandya) ನಾಗಮಂಗಲ ತಾಲ್ಲೂಕು ಹುಳ್ಳೇನಹಳ್ಳಿ ಗ್ರಾಮದಲ್ಲಿರುವ ದೇಗುಲ ಶ್ರೀ ಮಾಯಮ್ಮ ಮತ್ತು ಶ್ರೀ ದೈತಮ್ಮ ದೇವಾಲಯದಲ್ಲಿ ವಿಸ್ಮಯಕಾರಿ ಘಟನೆ ನಡೆದಿದೆ. ಬೆಳಗಿನ ಜಾವ ಸುಮಾರು 2 ಗಂಟೆಗೆ ಕಳ್ಳರು ಸಿಸಿಟಿವಿ ಕ್ಯಾಮೆರಾ ಕೇಬಲ್‌ಗಳನ್ನು ಕಟ್ ಮಾಡಿ ಕಳ್ಳತನಕ್ಕೆ ಯತ್ನಿಸಿಸಿದ್ದಾರೆ. ವಿಸ್ಮಯವೆಂಬಂತೆ ದೇಗುಲದಲ್ಲಿ ಅದೇ ಸಮಯಕ್ಕೆ ಸರ್ಪ ಕಾಣಿಸಿಕೊಂಡಿದೆ. ಸರ್ಪವನ್ನು ನೋಡಿ ಕಳ್ಳತನ ಬಿಟ್ಟು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.