ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಐದು ಮಂದಿಗೆ ಕೊರೋನಾ ಸೋಂಕು ದೃಢ| ನಾಲ್ಕು ತಿಂಗಳ ಗಂಡು ಹಾಗೂ ತಾಯಿಗೂ ತಗುಲಿದ ಕೊರೋನಾ ಸೋಂಕು| ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಮಹಮಾರಿ ಕೊರೋನಾ ಪ್ರಕರಣಗಳು|
ಕಲಬುರಗಿ(ಏ.22): ಇಂದು(ಬುಧವಾರ) ನಾಲ್ಕು ತಿಂಗಳು ಮಗು ಸೇರಿದಂತೆ ಐದು ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 35ಕ್ಕೇರಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಮಾರಿ ಕೊರೋನಾಗೆ ಮೂವರು ಬಲಿಯಾಗಿದ್ದಾರೆ.
ಕಳೆದು 3 ದಿನಗಳಿಂದ ಆರಾಮಾಗಿದ್ದ ಬೆಂಗಳೂರಿಗೆ ಮತ್ತೆ ವಕ್ಕರಿಸಿದ ಕೊರೋನಾ
ನಾಲ್ಕು ತಿಂಗಳ ಗಂಡು ಮಗು ಹಾಗೂ ತಾಯಿಗೂ ಕೊರೋನಾ ಸೋಂಕು ತಗುಲಿದೆ. ಒಬ್ಬರಿಂದ ಮೂವರಿಗೆ ಕೊರೋನಾ ಸೋಂಕು ಹರಡಿದೆ. ಇದರಿಂದ ಜಿಲ್ಲೆಯ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಜಿಲ್ಲಾಡಳಿತದ ತಲೆ ನೋವಿಗೆ ಕಾರಣವಾಗಿದೆ.