Jun 15, 2020, 5:39 PM IST
ರಾಮನಗರ(ಜೂ.15): ಒಂದು ಕಾಲದಲ್ಲಿ ಗ್ರೀನ್ ಝೋನ್‌ನಲ್ಲಿದ್ದ ರಾಮನಗರದಲ್ಲಿ ಕಳೆದ 15 ದಿನಗಳಿಂದ ಕೊರೋನಾ ಪೀಡಿತರ ಸಂಖ್ಯೆ ಹೆಚ್ಛಾಗುತ್ತಿದೆ. ರಾಮನಗರದಲ್ಲಿ ಇದೀಗ ಕೊರೋನಾಗೆ ಮೊದಲ ಸಾವು ಸಂಭವಿಸಿದೆ.
ಕರ್ನಾಟಕದಲ್ಲಿ ಕೊರೋನಾ ಮರಣಮೃದಂಗ ಜೋರಾಗಿದ್ದು, ಬಿಡದಿ ಮೂಲದ ತರಕಾರಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಎದೆ ನೋವು ಎಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವಿನ ಬಳಿಕ ಕೊರೋನಾ ಟೆಸ್ಟ್ ಮಾಡಿಸಿದಾಗ ಸೋಂಕು ತಗುಲಿರುವ ವಿಚಾರ ದೃಢಪಟ್ಟಿದೆ.
ದಕ್ಷಿಣ ಕನ್ನಡದಲ್ಲಿ ಐವರಿಗೆ ಸೋಂಕು, ಮೃತ ಯುವಕನಲ್ಲಿ ಕೊರೋನಾ ಸೋಂಕು ಪತ್ತೆ
ರಾಮನಗರದಲ್ಲಿ ತಾಯಿ ಹಾಗೂ ಮಗನಿಗೆ ಕೊರೋನಾ ಸೋಕು ತಗುಲಿರುವುದು ಖಚಿತವಾಗಿದೆ. ಸದ್ಯ ರಾಮನಗರದಲ್ಲಿ 22 ಸಕ್ರಿಯ ಕೊರೋನಾ ಪ್ರಕರಣಗಳಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.