Russia Ukraine war ಉಕ್ರೇನ್ ಗಡಿ ದಾಟುವ ವ್ಯಕ್ತಿಗಳಿಗೆ ಭಾರತದ ಪ್ರಜೆಗಳ ಸಹಾಯ!

Russia Ukraine war ಉಕ್ರೇನ್ ಗಡಿ ದಾಟುವ ವ್ಯಕ್ತಿಗಳಿಗೆ ಭಾರತದ ಪ್ರಜೆಗಳ ಸಹಾಯ!

Suvarna News   | Asianet News
Published : Mar 11, 2022, 11:56 PM IST

ಭಾರತದ ಎಲ್ಲಾ ಪ್ರಜೆಗಳ ರಕ್ಷಣೆ

ಪೋಲೆಂಡ್ ಗಡಿಯಲ್ಲಿ ಭಾರತದ ವಿದ್ಯಾರ್ಥಿಗಳಿಗೆ ಸಹಾಯ

ಸೇವಾ ಯುರೋಪ್ ಸಂಘಟನೆಯ ಮೂಲಕ ಸ್ಥಳೀಯ ನಾಗರಿಕರಿಗೆ ನೆರವು

ಬೆಂಗಳೂರು (ಮಾ.11): ಉಕ್ರೇನ್  (Ukraine) ದೇಶದಲ್ಲಿ ದಿನದಿಂದ ದಿನಕ್ಕೆ ರಷ್ಯಾದ (Russia) ಆಕ್ರಮಣ ತೀವ್ರವಾಗುತ್ತಿರುವ ನಡುವೆಯೇ, ಭಾರತ ಉಕ್ರೇನ್ ದೇಶದಲ್ಲಿದ್ದ ತನ್ನ ಎಲ್ಲಾ ನಾಗರಿಕರನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತಂದಿದೆ. ಆಪರೇಷನ್ ಗಂಗಾ (Operation ganga) ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತ ಹಲವಾರು ದಿಕ್ಕುಗಳಿಂದ ಸಹಾಯ ಪಡೆದುಕೊಂಡಿತು.

ಅದರಲ್ಲೂ ಕಾರ್ಯಾಚರಣೆಯ ಕೊನೇ ಹಂತದಲ್ಲಿ ಸುಮಿಯಲ್ಲಿ (Sumy) ಸಿಲುಕಿದ್ದ 694 ಭಾರತೀಯ ನಾಗರೀಕರನ್ನು ರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸಿತ್ತು.ಈ ಹಂತದಲ್ಲಿ ಪೋಲೆಂಡ್ ಗಡಿಯಲ್ಲಿದ್ದ ಭಾರತೀಯ ಪ್ರಜೆಗಳ ಸಂಘಟನೆ ಸೇವಾ ಯುರೋಪ್ ನೆರವಿಗೆ ಬಂದಿತ್ತು. ಯುರೋಪ್ ನ ಕೆಲ ದೇಶಗಳಲ್ಲಿ ನೆಲೆಸಿರುವ ಸಮಾನ ಮನಸ್ಕ ಭಾರತೀಯರು ಜತೆಗೂಡಿ ಸುಮಿಯಿಂದ ಹೊರಬಂದು, ಪೋಲೆಂಡ್ ಗಡಿ ತಲುಪುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಸಹಾಯ ಮಾಡಿದರು.

Operation Ganga : ಹಿಮದ ನೀರು ಕುಡಿದು ಬದುಕಿದ್ದೇವೆ!
ಭಾರತೀಯ ರಾಯಭಾರಿ ಕಚೇರಿ ಎಲ್ಲಾ ವ್ಯವಸ್ಥೆಗಳನ್ನು ಉತ್ತಮವಾಗಿ ಮಾಡುತ್ತಿದೆ. ಆದರೆ, ವಿದ್ಯಾರ್ಥಿಗಳು ಸುಮಿಯಿಂದ ಇಲ್ಲಿಗೆ ಬರುವುದೇ ದೊಡ್ಡ ಸಾಹಸವಾಗಿದೆ. ಇಲ್ಲಿಗೆ ಬಂದ ವಿದ್ಯಾರ್ಥಿಗಳಿಗೆ ಆಹಾರ, ನೀರು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಪೋಲೆಂಡ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಣೆ ಮೂಲದ ಗುಣೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more