ನ್ಯೂಸ್ ಅವರ್; ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!

ನ್ಯೂಸ್ ಅವರ್; ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!

Published : Oct 28, 2021, 11:39 PM ISTUpdated : Oct 28, 2021, 11:44 PM IST

* ಮತ್ತೆ ಎಲ್‌ಪಿಜಿ ದರ ಏರಿಕೆ... ಸಾವಿರ ರೂ. ಫಿಕ್ಸ್!
* ಉಪ ಸಮರ ಎದುರಿನಲ್ಲೇ ಡಿಕೆಶಿ ಆಪ್ತರ ಮೇಲೆ ಐಟಿ ದಾಳಿ
* ಆರ್ಯನ್ ಖಾನ್ ಗೆ ಕೊನೆಗು ಜಾಮೀನು ಸಿಕ್ತು
* ಪ್ರಚಾರ ಮುಗಿದರೂ ಮುಗಿಯದ ವಾಕ್ ಸಮರ

ಬೆಂಗಳೂರು(ಅ. 28)   ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (Karnataka By Poll) ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.  ಆದರೆ ನಾಯಕರ ಮಾತಿನ ಸಮರ ಇನ್ನೂ ನಿಂತಿಲ್ಲ. ಕಂಬಳಿ ಕದನ ಮತ್ತೆ ಹೊತ್ತಿಕೊಂಡಿದೆ. ಇದರ ನಡುವೆ ಸಿದ್ದರಾಮಯ್ಯ (Siddaramaiah) ಹೊಸ ಬಾಂಬ್ ಸಿಡಿಸಿದ್ದಾರೆ. ಗೋವಾ(Goa) ದಿಂದ ಬಂದ ಇಪ್ಪತ್ತಕ್ಕೂ ಅಧಿಕ  ಐಟಿ ಅಧಿಕಾರಿಗಳ ತಂಡ ಧಾರವಾಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಪ್ತರ ಮನೆ ಮೇಲೆ ದಾಳಿ ಮಾಡಿದ್ದಾರೆ.

ಏಜೆಂಟರಾಗಿ ಕೆಲಸ ಮಾಡುವ ಸ್ಥಿತಿ ಬಂದಿಲ್ಲ; ಗುಡುಗಿದ ದೇವೇಗೌಡ

ಇಂಧನ ಮತ್ತು ಅಡುಗೆ ಅನಿಲ(LPG) ದರ ನಿರಂತರ ಏರಿಕೆಯಾಗುತ್ತಲೇ ಇದೆ. ನವೆಂಬರ್ ಆರಂಭದಿಂದ ಎಲ್‌ಪಿಜಿ ದರದಲ್ಲಿ ಮತ್ತೊಂದು ಸುತ್ತಿನ ಏರಿಕೆಯಾಗಲಿದೆ ಎನ್ನಲಾಗಿದೆ.  ರಾಜ್ಯದಲ್ಲಿ ಈ ಬಾರಿ ಒಂದು ವಾರ ಕನ್ನಡ ರಾಜ್ಯೋತ್ಸವ (Karnataka Rajyotsava) ಆಚರಣೆ ಮಾಡಲಾಗುತ್ತಿದೆ. ಅದ್ಧೂರಿ ಆಚರಣೆಗೆ ಮಾತಾಡ್ ಮಾತಾಡ್ ಕನ್ನಡ ಅಭಿಯಾನದ ಮೂಲಕ ಚಾಲನೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ವಿಶೇಷ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಡ್ರಗ್ಸ್ ಪ್ರಕರಣದಲ್ಲಿ NCB ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ  ಆರ್ಯನ್ ಖಾನ್, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 25 ದಿನ ಕಳೆದಿದ್ದಾರೆ. ನಾಳೆ ಆರ್ಯನ್ ಖಾನ್ (Aryan Khan)  ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಡೀ ದಿನದ ಸುದ್ದಿ News Hour ನಲ್ಲಿ.. 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more