Mar 28, 2022, 4:59 PM IST
ಬೆಂಗಳೂರು(ಮಾ.28): ಐಟಿ ರೇಡ್, ಐಟಿ ನೋಟಿಸ್ ಇದೀಗ ರಾಜ್ಯ ಮಾತ್ರವಲ್ಲ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮಗೆ ಐಟಿ ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿಗಳಿಗೆ ಆರೋಪದಡಿ ಐಟಿ ಇಲಾಖೆ ಚೆನ್ಮಮ್ಮಗೆ ನೋಟಿಸ್ ನೀಡಿದೆ. ಇದರ ವಿರುದ್ಧ ಕೆಂಡಾಮಂಡಲವಾಗಿರುವ ಪುತ್ರ, ಮಾಜಿ ಸಚಿವ ರೇವಣ್ಣ, ರಾಜಕೀಯ ಕುತಂತ್ರ ಮಾಡಬೇಡಿ. ನಮ್ಮ ತಾಯಿ ಅಕ್ರಮ ಆಸ್ತಿ ಮಾಡಿಲ್ಲ ಎಂದಿದ್ದಾರೆ.