ಅಪ್ಪು ಕಂಡ ಕನಸು ನನಸು: ನಾಳೆ ಯುವ  ಮೊದಲ ಸಿನಿಮಾ ಟೈಟಲ್‌ ಟೀಸರ್ ಅನೌನ್ಸ್

ಅಪ್ಪು ಕಂಡ ಕನಸು ನನಸು: ನಾಳೆ ಯುವ ಮೊದಲ ಸಿನಿಮಾ ಟೈಟಲ್‌ ಟೀಸರ್ ಅನೌನ್ಸ್

Published : Mar 02, 2023, 04:31 PM IST

ಯುವ ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ನಿಗದಿ ಆಗಿದ್ದು,ಮಾರ್ಚ್ 3ನೇ ತಾರೀಖು ಯುವನ ಮೊದಲ ಸಿನಿಮಾದ  ಟೈಟಲ್‌ ಟೀಸರ್ ಅನೌನ್ಸ್ ಆಗ್ತಿದೆ

ಅಪ್ಪು ಕಂಡ  ಕನಸು ಈಗ ನನಸಾಗುವ ಟೈಮ್ ಕೂಡಿ ಬಂದಿದೆ. ಇಷ್ಟು ದಿನ ಯುವ ರಾಜ್ ಕುಮಾರ್ ಪಟ್ಟಾಭಿಷೇಕ ಯಾವಾಗ ಅಂತ ಕಾಯುತ್ತಿದ್ದ ದೊಡ್ಮನೆ ಅಭಿಮಾನಿಗಳು ಸಂಭ್ರಮಿಸೋ ದಿನ ಬಂದಿದೆ. ಯುವ ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ನಿಗದಿ ಆಗಿದೆ. ಪುನೀತ್ ರಾಜಕುಮಾರ್ ಗಾಗಿ ರೆಡಿಯಾಗಿದ್ದ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ಹೀರೋ ಆಗಿ ಬಿಗ್ಸ್ಕ್ರೀನ್ಗೆ ಲಾಂಚ್ ಆಗ್ತಿದ್ದಾರೆ. ಅಪ್ಪುಗೆ ಡೈರೆಕ್ಷನ್ ಮಾಡಬೇಕಾಗಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ಯುವನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಟೀಸರ್ ಮಾರ್ಚ್ 03ಕ್ಕೆ ರಿವೀಲ್ ಆಗಲಿದೆ.ಯುವನ ಬೆಳ್ಳಿತೆರೆ ಫಸ್ಟ್ ಎಂಟ್ರಿ ಸಿನಿಮಾವನ್ನ ಕಟ್ಟಿಕೊಡುವ ಜವಾಬ್ದಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ವಹಿಸಿಕೊಂಡಿದ್ದಾರೆ. ಅದಕ್ಕಾಗಿ ಪ್ಯಾಮಿಲಿ ಎಮೋಷನಲ್ ಆಕ್ಷನ್ ಸ್ಟೋರಿ ಹೇಣೆದಿದ್ದಾರಂತೆ ಸಂತೋಷ್ ಆನಂದ್ ರಾಮ್. ಈಗಾಗ್ಲೆ ಟೈಟಲ್ ಅನೌನ್ಸ್ ಮಾಡೋಕೆ ಒಂದು ಟೀಸರ್ ಸಿದ್ಧಪಡಿಸಿರೋ ಸಂತೋಷ್ ಆನಂದ್ ರಾಮ್ ಯುವ ರಾಜ್ ಕುಮಾರ್ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಮಾರ್ಚ್ 3ನೇ ತಾರೀಖು ಯುವನ ಮೊದಲ ಸಿನಿಮಾದ ಪೂಜೆ ಹಾಗು ಟೈಟಲ್‌ ಟೀಸರ್ ಅನೌನ್ಸ್ ಆಗ್ತಿದೆ.

'ಕಾಂತಾರ 2'ಗಾಗಿ ಮೆಗಾ ಪ್ಲ್ಯಾನ್ ಹೆಣೆದ ಡಿವೈನ್ ಸ್ಟಾರ್

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ