Dec 22, 2022, 12:01 PM IST
ನೀರ್ದೋಸೆ ಚೆಲುವೆ ಹರಿಪ್ರಿಯಾ ಈಗ ಹೊಸ ಬಾಳಿಗೆ ಕಾಲಿಡೋ ಹೊಸ್ತಿಲಲ್ಲಿದ್ದಾರೆ. ಕಂಚಿನ ಕಂಠದ ವಸಿಷ್ಠ ಸಿಂಹನ ಪ್ರೀತಿಯಲ್ಲಿ ಬಿದ್ದು ಕದ್ದು ಮುಚ್ಚಿ ಓಡಾಡುತ್ತಿದ್ದ ಹರಿಪ್ರಿಯಾ ಇತ್ತೀಚೆಗಷ್ಟೆ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ಇನ್ನೇನು ಹಸೆಮಣೆ ಏರಿ ಹೊಸ ಸಂಸಾರ ಸಾಗಿಸಬೇಕಾದ ಮದುಮಗಳು ಹರಿಪ್ರಿಯಾ ಈಗ ಮರಳುಗಾಡಿನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಆ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕು ಹರಿಪ್ರಿಯಾ ಮರಳುಗಾಡಿನ ಜಾಲಿ ರೈಡ್ ವೀಡಿಯೋ ಚಿತ್ರೀಕರಣ ಆಗಿದ್ದು ಯಾವಾಗ ಗೊತ್ತಾ.? ತನ್ನ ಮನ ಮೆಚ್ಚಿನ ಹುಡುಗ ವಸಿಷ್ಠ ಸಿಂಹ ಹಾಗು ಹರಿಪ್ರಿಯಾ ಎಂಗೇಜ್ಮೆಂಟ್ ಆಗೋ ಮೊದಲು ದುಬೈಗೆ ಹಾರಿದ್ರು. ಆಗ ದುಬೈನ ಮರಳುಗಾಡಿನಲ್ಲಿ ಈ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಮರಳಿನ ಮೇಲೆ ಓಡೋ ವಾಹನದಲ್ಲಿ ಹರಿಪ್ರಿಯಾ ಪಕ್ಕದಲ್ಲೇ ಕೂತಿದ್ದ ವಸಿಷ್ಠ ಸಿಂಹ ಈ ವೀಡಿಯೋ ರೆಕಾರ್ಡ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment