'ಪ್ರೀತ್ಸೋದ್ ತಪ್ಪಾ' ಕಾಲಕ್ಕೆ ಹೋಗಿ ಬಂದ ಶಿಲ್ಪಾ ಶೆಟ್ಟಿ-ರವಿಚಂದ್ರನ್; KD ಚಿತ್ರದಲ್ಲಿಲ್ವಾ ರತಿ-ಮನ್ಮಥರ ಜೋಡಿ..?

'ಪ್ರೀತ್ಸೋದ್ ತಪ್ಪಾ' ಕಾಲಕ್ಕೆ ಹೋಗಿ ಬಂದ ಶಿಲ್ಪಾ ಶೆಟ್ಟಿ-ರವಿಚಂದ್ರನ್; KD ಚಿತ್ರದಲ್ಲಿಲ್ವಾ ರತಿ-ಮನ್ಮಥರ ಜೋಡಿ..?

Published : Jul 14, 2025, 04:17 PM IST

1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.

ಧ್ರುವ ಸರ್ಜಾ ನಟನೆಯ ಕೆಡಿ (KD) ಸಿನಿಮಾದ ಬೆಂಗಳೂರು ಇವೆಂಟ್​ನಲ್ಲಿ ರವಿಮಾಮ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಹಂಚಿಕೊಂಡಿದ್ದಾರೆ. ಈ ಜೋಡಿಯನ್ನ ಒಟ್ಟಾಗಿ ನೋಡಿದವರಿಗೆ ‘ಪ್ರೀತ್ಸೋದ್ ತಪ್ಪಾ..?’ ಅನ್ನೋ ಪ್ರಶ್ನೆ ಕಾಡದೇ ಇರುತ್ತಾ,.? ದಶಕಗಳ ಬಳಿಕ ಒಟ್ಟಾಗಿ ಕಾಣಿಸಿಕೊಂಡ ರವಿಚಂದ್ರನ್ & ಶಿಲ್ಪಾ ಒಂದಿಷ್ಟು ಗುಟ್ಟು ಹೇಳಿದ್ದಾರೆ.

KD ಸಿನಿಮಾದ ಪ್ರಮೋಷನಲ್ ಇವೆಂಟ್ಸ್ ಮುಂಬೈ, ಹೈದ್ರಾಬಾದ್​, ಚೆನ್ನೈ ನಂತರ ಬೆಂಗಳೂರಿನಲ್ಲಿ ಕೂಡ ನಡೆದಿದೆ. ಬೆಂಗಳೂರಿನ ಇವೆಂಟ್​​ನ  ವಿಶೇಷತೆ ಅಂದ್ರೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ವೇದಿಕೆ ಮೇಲೆ ಮುಖಾ ಮುಖಿ ಆಗಿದ್ರು. ಇವರಿಬ್ಬರನ್ನೂ ಒಟ್ಟಿಗೆ ನೋಡಿದಾಗ ಪ್ರೀತ್ಸೋದ್ ತಪ್ಪಾ ನೆನಪಾಗದೇ ಇರುತ್ತಾ..?

1998ರಲ್ಲಿ ಬಂದ ಪ್ರೀತ್ಸೋದ್ ತಪ್ಪಾ ಮೂವಿನಲ್ಲಿ ರವಿಮಾಮ ಮೊಟ್ಟ ಮೊದಲ ಬಾರಿಗೆ ಶಿಲ್ಪಾಶೆಟ್ಟಿಯನ್ನ ಕನ್ನಡಕ್ಕೆ ಕರೆತಂದಿದ್ರು. ಬಾಲಿವುಡ್ ನಲ್ಲಿ ಮಿಂಚ್ತಾ ಇದ್ದ ಈ ಮಂಗಳೂರು ಬೆಡಗಿಯನ್ನ ಕರುನಾಡಿಗೆ ಕರೆದುಕೊಂಡು ಬಂದಿದ್ರು.

ಪ್ರೀತ್ಸೋದ್ ತಪ್ಪಾ ಸಿನಿಮಾದ ಒಂದೊಂದು ಹಾಡುಗಳು ಬಿಗ್ಗೆಸ್ಟ್ ಹಿಟ್. ಅದ್ರಲ್ಲೂ ಶಿಲ್ಪಾ ಶೆಟ್ಟಿ ‘ರಾಜಾ ರಾಜಾ.. ನನ್ನ ಕನಸಿನ ರಾಜಾ..’ ಅಂತ ಹಾಡಿ ಕುಣಿದಿದ್ದು ಮರೆಯುದುಂಟಾ..? ಆ ಹಾಡಿನ ಶೂಟಿಂಗ್​ ಹಿಂದಿನ ಗಮ್ಮತ್ತಿನ ಕಥೆಯನ್ನ ಶಿಲ್ಪಾ ವಿವರಿಸಿದ್ದು ಹೀಗೆ
ಬೈಟ್ : ( 05.24 - 06.02 )

ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಅನ್ನೋ ಎರಡೆರಡು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈ ಸೂಪರ್ ಹಿಟ್ ಜೋಡಿ ಇದೀಗ ಕೆಡಿ ಸಿನಿಮಾದಲ್ಲಿ ಒಟ್ಟಾಗಿದೆ. ಆದ್ರೆ ಇಲ್ಲಿ ಇಬ್ಬರ ಕಾಂಬಿನೇಷನ್ ಇರೋದಿಲ್ಲ. ಶಿಲ್ಪಾ ಶೆಟ್ಟಿ ಇಲ್ಲಿ ಸತ್ಯವತಿ ಅನ್ನೋ ಪವರ್​ಫುಲ್ ಲೇಡಿ ಪಾತ್ರದಲ್ಲಿ ನಟಿಸಿದ್ರೆ,  ರವಿಚಂದ್ರನ್ ಅಂಡರ್​ವರ್ಕ್ಡ್ ಲಿಂಕ್ ಇರುವ ಅಣ್ಣಯ್ಯಪ್ಪ ಅನ್ನೋ ಪಾತ್ರ ಮಾಡಿದ್ದಾರೆ.

ಕೆಡಿ ಅಡ್ಡಾದಲ್ಲಿ ಈ ಸೂಪರ್ ಜೋಡಿಯ ಕಾಂಬಿನೇಷನ್​ ಇಲ್ಲದೇ ಹೋದ್ರೂ ಕೆಡಿ  ಪ್ರಮೋಷನಲ್ ಇವೆಂಟ್​ನಲ್ಲಂತೂ ಈ ಜೋಡಿ ವೇದಿಕೆ ಹಂಚಿಕೊಂಡಿದೆ. ಹಳೆ ನೆನಪುಗಳನ್ನ ತೆರೆದಿಟ್ಟು ಎಲ್ಲರನ್ನೂ ರಂಜಿಸಿದೆ. ಎಲ್ಲರೂ ಒಂದೊಮ್ಮೆ ‘ಪ್ರೀತ್ಸೋದ್ ತಪ್ಪಾ’ ಕಾಲಕ್ಕೆ ಹೋಗಿ ಬಂದಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
Read more