ಈಗ ಕದ್ದು ಮುಚ್ವಿ ಓಡಾಡೋ ದಿನಗಳು ಮುಗಿದಿವೆ ಅನ್ನೋ ತರಹ ವಿಜಯ್ ದೇವರಕೊಂಡ ರಶ್ಮಿಕಾ, ಓಪನ್ ಆಗೇ ಓಡಾಡ್ತಾ ಇದ್ದಾರೆ. ಅನೇಕ ಬಾರಿ ತಾವು ಪ್ರೀತಿಯಲ್ಲಿದ್ದೀವಿ ಅನ್ನೋದನ್ನ ಸೂಚ್ಯವಾಗಿ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಅಂಡ್ ವಿಜಯ್ ದೇವರಕೊಂಡ (Vijay Deverakonda) ಈ ಹಿಂದೆ ಗುಟ್ಟು ಗುಟ್ಟಾಗಿ ವಿದೇಶ ಯಾತ್ರೆ ಮಾಡ್ತಾ ಇದ್ರು. ಆದ್ರೆ ಈ ಸಾರಿ ಈ ಜೋಡಿ ಜೊತೆಯಾಗೇ ನ್ಯೂಯಾರ್ಕ್ಗೆ ಹೋಗಿದೆ. ಅಷ್ಟೇ ಅಲ್ಲ ಈ ಪ್ರಣಯಪಕ್ಷಿಗಳು ಕೈ ಕೈ ಹಿಡಿದು ಪೋಸ್ ಕೊಟ್ಟಿದ್ದಾರೆ.
ನ್ಯೂಯಾರ್ಕ್ನಲ್ಲಿ ಪ್ರಣಯ ಪಕ್ಷಿಗಳು..!
ಯೆಸ್ ರಶ್ಮಿಕಾ ಌಂಡ್ ವಿಜಯ್ ದೇವರಕೊಂಡ ನ್ಯೂಯಾರ್ಕ್ಗೆ ಹಾರಿದ್ದಾರೆ. ನ್ಯೂಯಾರ್ಕ್ನಲ್ಲಿ ನಡೆದ 43ನೇ ‘ಇಂಡಿಯನ್ ಡೇ ಪರೇಡ್’ಗೆ ಇಬ್ಬರೂ ಮುಖ್ಯ ಅತಿಥಿ ಆಗಿ ಹೋಗಿದ್ದಾರೆ. ಅಲ್ಲಿರುವ ಭಾರತೀಯರು ಇವರನ್ನ ಅತಿಥಿಯಾಗಿ ಕರೆಸಿದ್ದರು. ಸೋ ಇಂಡಿಯನ್ ಡೇ ಪರೇಡ್ ಪರೇಡ್ನಲ್ಲಿ ರಶ್ಮಿಕಾ ಌಂಡ್ ವಿಜಯ್ ದೇವರಕೊಂಡ ಖುಷಿ ಖುಷಿಯಾಗಿ ಜೊತೆ ಜೊತೆಯಾಗಿ ಭಾಗಿ ಆಗಿದ್ದಾರೆ.
ರಶ್ಮಿಕಾ ಕೈ ಹಿಡಿದು ನಡೆಸಿದ ದೇವರಕೊಂಡ
ಮ್ಯಾನ್ಹಟನ್ ರೋಡ್ನಲ್ಲಿ ವಿಜಯ್ ಌಂಡ್ ರಶ್ಮಿಕಾ ಒಟ್ಟಾಗಿ ನಡೆದಿದ್ದಾರೆ. ಈ ವೇಳೆ ಇಬ್ಬರು ಕೈ ಕೈ ಹಿಡಿದುಕೊಂಡಿದ್ರು. ಇವರಿಬ್ಬರ ಗೆಳೆತನದ ಬಗ್ಗೆ ಹೊಸದಾಗೇನೂ ಹೇಳಬೇಕಿಲ್ಲ. ಎಲ್ಲರೂ ಇವರನ್ನ ಪ್ರಣಯಪಕ್ಷಿಗಳು ಅಂತ ಕರೀತಾರೆ, ಇಬ್ಬರೂ ಕೂಡ ತಾವು ರಿಲೇಷನ್ ಶಿಪ್ನಲ್ಲಿ ಇದ್ದೀವಿ ಅಂತ ಓಪನ್ ಆಗಿ ಹೇಳಿಲ್ಲ ಹಾಗಂತ ಈ ಇವರು ಲವ್ಬರ್ಡ್ಸ್ ಅನ್ನೋದು ಗುಟ್ಟಾಗಿ ಕೂಡ ಉಳಿದಿಲ್ಲ.
ಕದ್ದು ಮುಚ್ಚಿ ಫಾರಿನ್ಗೆ ಹೋಗ್ತಿದ್ದ ಜೋಡಿ..!
ಈ ಹಿಂದೆ ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ಅನೇಕ ಬಾರಿ ವಿದೇಶಕ್ಕೆ ವೆಕೆಶೇನ್ಗೆ ಹೋಗಿದ್ದಾರೆ. ಆದ್ರೆ ಅದನ್ನ ಗುಟ್ಟಾಗೇ ಮೆಂಟೈನ್ ಮಾಡ್ತಾ ಇದ್ರು. ಆದ್ರೆ ಇವರ ಫ್ಯಾನ್ಸ್ ಫೋಟೋಗಳಲ್ಲಿನ ಸಾಮ್ಯತೆ ಹುಡುಕಿ ಇಬ್ಬರೂ ಜೊತೆಗಿದ್ದಾರೆ ಅನ್ನೋ ಗುಟ್ಟನ್ನ ರಟ್ಟು ಮಾಡ್ತಾ ಇದ್ರು.
ಈಗ ಕದ್ದು ಮುಚ್ವಿ ಓಡಾಡೋ ದಿನಗಳು ಮುಗಿದಿವೆ ಅನ್ನೋ ತರಹ ವಿಜಯ್ ದೇವರಕೊಂಡ ರಶ್ಮಿಕಾ, ಓಪನ್ ಆಗೇ ಓಡಾಡ್ತಾ ಇದ್ದಾರೆ. ಅನೇಕ ಬಾರಿ ತಾವು ಪ್ರೀತಿಯಲ್ಲಿದ್ದೀವಿ ಅನ್ನೋದನ್ನ ಸೂಚ್ಯವಾಗಿ ಹೇಳಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದ ಗೀತ ಗೋವಿಂದಂ ಸಿನಿಮಾ ತೆರೆಕಂಡು 7 ವರ್ಷಗಳಾದ್ವು. ಇತ್ತೀಚಿಗಷ್ಟೇ ಈ ಇಬ್ಬರೂ ಆ ಸಿನಿಮಾದ ಪೋಸ್ಟರ್ ಹಂಚಿಕೊಂಡು ಏಳನೇ ಌನಿವರ್ಸರಿ ಸೆಲೆಬ್ರೇಟ್ ಮಾಡಿದ್ರು.
ಅಸಲಿಗೆ ರಶ್ಮಿಕಾ ಅಂಡ್ ವಿಜಯ್ ದೇವರಕೊಂಡ ನಡುವೆ ಪ್ರೀತಿ ಮೂಡಿದ್ದೇ ಈ ಸಿನಿಮಾ ಸೆಟ್ನಲ್ಲಿ ಅಂತ ಹೇಳಲಾಗುತ್ತೆ. ಸೋ ಇವರ ಪ್ರೀತಿಗೂ 7 ವರ್ಷ ತುಂಬಿದೆ. 7 ವರ್ಷ ಆಯ್ತು ಏಳು ಹೆಜ್ಜೆ ತುಳಿಯೋದು ಯಾವಾಗ ಅಂತ ಫ್ಯಾನ್ಸ್ ಪ್ರಶ್ನೆ ಮಾಡ್ತಾ ಇದ್ದಾರೆ.!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...