ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.
ಬೆಂಗಳೂರು (ಡಿ. 20): ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.
ಡಿಸೆಂಬರ್ 24 ರಂದು ಐದು ಭಾಷೆಯಲ್ಲಿ 83 ರಿಲೀಸ್ ಆಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಬ್ಬ ಕ್ರಿಕೇಟ್ ಪ್ರೇಮಿಯಾಗಿ ಈ ಸಿನಿಮಾವನ್ನ ಕರ್ನಾಟಕದಾದ್ಯಂತ ಪ್ರಸ್ತುತಪಡಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಬಯೋಪಿಕ್ ಮಾಡಬೇಕು ಅನ್ನುವ ಆಸೆ ಕನ್ನಡಿಗರಿಗಿದೆ. ಇದಕ್ಕೆ ‘83’ ನಿರ್ದೇಶಕ ಕಬೀರ್ ಖಾನ್ ಒಪ್ಪಿಗೆ ನೀಡಿದ್ದಾರೆ. ದ್ರಾವಿಡ್ ಸಿನಿಮಾ ಮಾಡೋ ಹಕ್ಕನ್ನು ತಂದರೆ ಬಯೋಪಿಕ್ ಮಾಡ್ತೀನಿ ಎಂದಿದ್ದಾರೆ ಎಂದರು.