Mysuru: ಮಾರ್ಚ್‌ನಲ್ಲಿ ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ವೇದಿಕೆ ಸಜ್ಜು

Feb 23, 2022, 12:00 PM IST

ಒಂದೆಡೆ ಕೊರೊನಾ ಮೂರನೇ ಅಲೆಯ ಅಬ್ಬರ, ಮತ್ತೊಂದೆಡೆ ಅಥಿತಿಗಳ ಆಹ್ವಾನದ ವಿಚಾರದಲ್ಲಿ ಏರ್ಪಟ್ಟಿದ್ದ ವಿವಾದ. ಎರಡೂ ಕಾರಣಗಳಿಂದಾಗಿ ಮೈಸೂರಿನ ರಂಗಾಯಣ(Rangayana)ದ ಬಹುರೂಪಿ ರಂಗೋತ್ಸವ ಕಳೆದ ವರ್ಷ ಡಿಸೆಂಬರ್‌(December)ನಲ್ಲಿ ನಿಂತು ಹೋಗಿತ್ತು.‌ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಉತ್ಸವಕ್ಕೆ ಆಹ್ವಾನಿಸಿರುವುದರ ವಿರುದ್ಧ ಎಡಪಂಥೀಯ ಸದಸ್ಯರು ದನಿ ಎತ್ತಿದ್ದರು. ಇದರ ಜೊತೆಗೆ ಕೊರೊನಾ(Corona) ಅಬ್ಬರ ಹೆಚ್ಚಾಗಿ ಬಹುರೂಪಿ ನಾಟಕೋತ್ಸವ ಮುಂದೂಡಲ್ಪಟ್ಟಿತ್ತು.

 ಈಗ ಮತ್ತೊಮ್ಮೆ ಬಹುರೂಪಿಗೆ ಕಾಲ ಕೂಡಿ ಬಂದಿದ್ದು, ಮಾರ್ಚ್(March) 11 ರಿಂದ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಜರುಗಲಿದೆ. ಈ ಬಾರಿ "ತಾಯಿ" ಎಂಬ ಶೀರ್ಷಿಕೆ ಅಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದ್ದು, ತಾಯಿ ಬಗ್ಗೆ ವಿಸ್ತೃತ ಚರ್ಚೆಯನ್ನೊಳಗೊಂಡ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ.

ಜಮೀನು, ಜಲ, ಜಾನುವಾರು, ಜಂಗಲ್, ಜನ ಎಂಬ ಪಂಚಸೂತ್ರದಲ್ಲಿ ತಾಯಿ(Mother) ಮತ್ತು ತಾಯ್ತನ ನೋಡುವ ಪ್ರಯತ್ನ ರಂಗೋತ್ಸವದಲ್ಲಿ ನಡೆಯಲಿದೆ. ವಿವಿಧ ರಾಜ್ಯ, ಜಿಲ್ಲೆಗಳ ಶ್ರೇಷ್ಠ ನಾಟಕಗಳ ಪ್ರದರ್ಶನ, ಜಾನಪದ ಕಲಾಪ್ರದರ್ಶನ, ಚಲನಚಿತ್ರೋತ್ಸವ(Film Festival), ಪುಸ್ತಕ ಪ್ರದರ್ಶನ(Book Exhibition), ಕರಕುಶಲ ಪ್ರದರ್ಶನ, ಪ್ರಾತ್ಯಕ್ಷಿಕೆ, ಆಹಾರ ಮೇಳ ಸೇರಿ ಹಲವು ಕಾರ್ಯಕ್ರಮಗಳನ್ನು ರಂಗಾಯಣ ಆಯೋಜನೆ ಮಾಡಿಕೊಂಡಿದ್ದು, ಈ ಬಾರಿ ಬಹುರೂಪಿಯಲ್ಲಿ ವಿವಿಧ ರಾಜ್ಯ, ವಿವಿಧ ಭಾಷೆಗಳ ಒಟ್ಟು 35 ನಾಟಕಗಳ ಪ್ರದರ್ಶನಗೊಳ್ಳಲಿವೆ. 

KPAC Lalitha Passes Away : ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ಇನ್ನಿಲ್ಲ

ರಾಷ್ಟ್ರ ಪ್ರಖ್ಯಾತ ನಟಿ ಶಬಾನಾ ಆಜ್ಮಿ(Shabana Azmi), ನಾಸಿರುದ್ದೀನ್ ಶಾ, ಅಮೋಲ್ ಪಾಲೇಕರ್, ಶ್ರೀಲಂಕಾ(Srilanka)ದ ಪರಾಕ್ರಮ ನಿರಿಯಲ್ಲ, ಪ್ರಸನ್ನ, ಅನಂತ್ ನಾಗ್ ಸೇರಿ ಇತರ ಹಿರಿಯ ರಂಗ ಕಲಾವಿದರಿಂದ ಬಹುರೂಪಿ ಉದ್ಘಾಟನೆ ನಡೆಯಲಿದೆ. ಸದ್ಯ ಸಮಾರೋಪದ ಬಗ್ಗೆ ರಂಗಾಯಣ ನಿರ್ದೇಶಕರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.