ಎಲ್ಲೆಲ್ಲೂ 'ಕೂಲಿ' ಮೇನಿಯಾ..! ಥಿಯೇಟರ್​ಗಳೆಲ್ಲಾ ರಜನಿಮಯ..!

ಎಲ್ಲೆಲ್ಲೂ 'ಕೂಲಿ' ಮೇನಿಯಾ..! ಥಿಯೇಟರ್​ಗಳೆಲ್ಲಾ ರಜನಿಮಯ..!

Published : Aug 14, 2025, 04:45 PM IST

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬರುತ್ತೆ ಅಂದ್ರೆ ಸಿನಿ ಇಂಡಸ್ಟ್ರಿ ಶೇಕ್ ಆಗುತ್ತೆ. ಚಿತ್ರಮಂದಿರಗಳು ಕಳೆ ಕಟ್ಟುತ್ವೆ ಬಾಕ್ಸಾಫೀಸ್​​ನಲ್ಲಿ ಹಣದ ಹೊಳೆಯೇ ಹರಿಯುತ್ತೆ. ಇದೀಗ ಕೂಲಿ ರಿಲೀಸ್ ಸಮಯದಲ್ಲೂ ಅದೇ ಆಗ್ತಾ ಇರೋದು.

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷೆಯ  ಕೂಲಿ ಸಿನಿಮಾ ಇಂದು ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಅನೇಕ ಕಡೆ ತಡರಾತ್ರಿಯೇ ಶೋ ನಡೆದಿವೆ.  ಈಗಾಗ್ಲೇ ಕೂಲಿ ಸಿನಿಮಾ ಹೇಗಿದೆ ಅನ್ನೋ ಟಾಕ್ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ. ಬನ್ನಿ ಹಾಗಾದ್ರೆ ಕೂಲಿನಲ್ಲಿ ಏನಿದೆ ಅನ್ನೋ ಅಸಲಿ ಕಹಾನಿ ನೋಡೋಣ.

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬರುತ್ತೆ ಅಂದ್ರೆ ಸಿನಿ ಇಂಡಸ್ಟ್ರಿ ಶೇಕ್ ಆಗುತ್ತೆ. ಚಿತ್ರಮಂದಿರಗಳು ಕಳೆ ಕಟ್ಟುತ್ವೆ ಬಾಕ್ಸಾಫೀಸ್​​ನಲ್ಲಿ ಹಣದ ಹೊಳೆಯೇ ಹರಿಯುತ್ತೆ. ಇದೀಗ ಕೂಲಿ ರಿಲೀಸ್ ಸಮಯದಲ್ಲೂ ಅದೇ ಆಗ್ತಾ ಇರೋದು. ರಜನಿಕಾಂತ್ ನಟನೆಯ ಕೂಲಿ ಸಿನಿಮಾ ವಿಶ್ವದಾದ್ಯಂತ ಬರೊಬ್ಬರಿ 7500 ಸ್ಕ್ರೀನ್​​ಗಳಲ್ಲಿ ತೆರೆಗೆ ಬಂದಿದೆ.

ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಕಿಂಗ್ ನಾಗಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ, ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಸೇರಿದಂತೆ ನಾನಾ ಭಾಷೆಯ ಸ್ಟಾರ್​​ಗಳ ದಂಡು ಇದೆ. ಲೋಕೇಶ್ ಕನಗರಾಜ್ ಡೈರೆಕ್ಟ್ ಮಾಡಿರೋ ಈ ಸಿನಿಮಾ ಬಗ್ಗೆ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಅದಕ್ಕೆ ತಕ್ಕಂತೆ ಮೊದಲ ದಿನದ ಶೋಗಳೆಲ್ಲಾ ಹೌಸ್ ಫುಲ್ ಆಗಿವೆ.

ಯೆಸ್ ತಡರಾತ್ರಿಯೇ ಕೂಲಿ ಸಿನಿಮಾ ನೋಡಿದ ಫ್ಯಾನ್ಸ್ ಇದು ಪಕ್ಕಾ ಪವರ್ ಪ್ಯಾಕ್ಡ್ ಮಾಸ್ ಎಂಟರ್​ಟೈನರ್ ಮೂವಿ ಅಂತ ಕೊಂಡಾಡ್ತಾ ಇದ್ದಾರೆ. ಅದ್ರಲ್ಲೂ ರಜನಿಕಾಂತ್ ಸ್ಟೈಲ್, ಗೆಟಪ್, ಆಕ್ಚನ್ ನೋಡಿದವರು 1990ರ ದಶಕದ ರಜನಿನ ಮತ್ತೆ ನೋಡಿದಂತೆ ಆಯ್ತು ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.

ಇನ್ನೂ ಕಿಂಗ್ ನಾಗಾರ್ಜುನ ಇಲ್ಲಿ ವಿಲನ್ ರೋಲ್ ಮಾಡಿದ್ದು ಸಖತ್ ಸ್ಕೋರ್ ಮಾಡಿದ್ದಾರಂತೆ. ಆಮೀರ್ ಖಾನ್, ಉಪೇಂದ್ರ ಸಣ್ಣದೊಂದು ಸೀಕ್ವೆನ್ಸ್​ನಲ್ಲಿ ಬಂದ್ರೂ ಫ್ಯಾನ್ಸ್​ಗೆ ಕಿಕ್ಕೇರಿಸ್ತಾರೆ. ಡಿಂಪಲ್ ಕ್ವೀನ್​ ರಚಿತಾಗೆ ಪುಟ್ಟ ಪಾತ್ರ ಇದೆ. ಶೃತಿ ಹಾಸನ್ ಚಿತ್ರದುದ್ದಕ್ಕೂ ಇದ್ದಾರೆ.

ಯೆಸ್ ಕೂಲಿ ಸಿನಿಮಾದ ಮೊದಲ ದಿನದ ಬಹುತೇಕ ಶೋಗಳು ಹೌಸ್ ಫುಲ್ ಆಗಿದ್ದು ಮೊದಲ ದಿನ ಸಿನಿಮಾ 150 ಪ್ಲಸ್ ಕೋಟಿ ಗಳಿಸೋದು ಫಿಕ್ಸ್ ಅಂದಿದ್ದಾರೆ ಬಾಕ್ಸಾಫೀಸ್ ಪಂಡಿತರು. ಇನ್ನೂ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂ ಬಂದಿದ್ದು ಈ ಸಿನಿಮಾ ಸಾವಿರ ಕೋಟಿ ಗಳಿಸೋ ಸಾಧ್ಯತೆ ದಟ್ಟವಾಗಿವೆಯಂತೆ. ಅಲ್ಲಿಗೆ ಕೂಲಿ ಸಾವಿರ ಕೋಟಿ ಗಳಿಸಿದ್ರೆ , ಥೌಸಂಡ್ ಕ್ರೋರ್ ಕ್ಲಬ್ ಸೇರಿದ ಮೊದಲ ಕಾಲಿವುಡ್ ಸಿನಿಮಾ ಇದಾಗಲಿದೆ.

ಇನ್ನೂ ಕೂಲಿ ಸಿನಿಮಾ ಕ್ರೇಜ್ ಬರೀ ಇಂಡಿಯಾದಲ್ಲಿ ಮಾತ್ರ ಅಲ್ಲ ವಿದೇಶಗಳಲ್ಲೂ ಜೋರಾಗಿದೆ. ಅಮೇರಿಕ, ಕೆನಡಾದಲ್ಲಿ ದಾಖಲೆ ಸ್ಕ್ರೀನ್​ಗಳಲ್ಲಿ ಸಿನಿಮಾ ತೆರೆಕಂಡಿದೆ. ಸಿಂಗಾಪುರ್​ನಲ್ಲಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ಕೊಟ್ಟು ಕೂಲಿ ಸಿನಿಮಾ ಟಿಕೆಟ್ ಬುಕ್ ಮಾಡಿಕೊಟ್ಟಿದೆ. ಒಟ್ಟಾರೆ ಸದ್ಯ ಎಲ್ಲೆಲ್ಲೂ ಕೂಲಿ ಮೇನಿಯಾ..! ಥಿಯೇಟರ್​ಗಳೆಲ್ಲಾ ರಜನಿಮಯ..!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more