ಸ್ಯಾಂಡಲ್‌ವುಡ್ ಮಾದಕ ವಸ್ತು ನಂಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಸಿನಿಮಾದಲ್ಲಿ ಸಮಾಜ ಸೇವಕಿ. ನಿಜ ಜೀವನದಲ್ಲಿ ವಿಲನ್. ಇನ್ನೂ ವಿಪರ್ಯಾಸ ಅಂದ್ರೆ ಡ್ರಗ್ ಮುಕ್ತ ಜಾಗೃತಿ ಕಾರ್ಯಕ್ರಮಗಳಲ್ಲಿ ಪೊಲೀಸರ ಜೊತೆ ಭಾಗಿಯಾಗಿದ್ದರು. ಈಗ ಅದೇ ವಿಚಾರಕ್ಕೆ ಅಂದರ್ ಆಗಿದ್ದಾರೆ.
ಬೆಂಗಳೂರು (ಸೆ. 06): ಸ್ಯಾಂಡಲ್‌ವುಡ್ ಮಾದಕ ವಸ್ತು ನಂಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಸಿನಿಮಾದಲ್ಲಿ ಸಮಾಜ ಸೇವಕಿ. ನಿಜ ಜೀವನದಲ್ಲಿ ವಿಲನ್. ಇನ್ನೂ ವಿಪರ್ಯಾಸ ಅಂದ್ರೆ ಡ್ರಗ್ ಮುಕ್ತ ಜಾಗೃತಿ ಕಾರ್ಯಕ್ರಮಗಳಲ್ಲಿ ಪೊಲೀಸರ ಜೊತೆ ಭಾಗಿಯಾಗಿದ್ದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಮಾಸ್ಕ್ ವಿತರಣೆ ಮಾಡಿದ್ದರು. ಸಮಾಜದ ಕಣ್ಣಿಗೆ ಸಮಾಜ ಸೇವಕಿಯಾಗಿ ಕಾಣುವ ರಾಗಿಣಿ, ನಿಜಜೀವನದಲ್ಲಿ ಮಾತ್ರ ಡ್ರಗ್ ಅಡಿಕ್ಟ್ ಆಗಿರುವುದು ವಿಪರ್ಯಾಸ. ತೆರೆ ಮೇಲೆ ಒಂದು, ತೆರೆ ಹಿಂದೆ ಇನ್ನೊಂದು ರೀತಿ ಅನ್ನೋದು ಇದೇ ಕಾರಣಕ್ಕೆ ನೋಡಿ..!