ನಟಿ ಮೇಘನಾ ರಾಜ್ ಚಿರು ಅಗಲಿಕೆಯ ನೋವಿನಲ್ಲಿದ್ದಾರೆ. ನಿನ್ನೆ ಮಗುವಿನ ತೊಟ್ಟಿಲು ಶಾಸ್ತ್ರ ನಡೆದಿದ್ದು, ಮೊದಲ ಬಾರಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದಾರೆ.
ಬೆಂಗಳೂರು (ನ. 13): ನಟಿ ಮೇಘನಾ ರಾಜ್ ಚಿರು ಅಗಲಿಕೆಯ ನೋವಿನಲ್ಲಿದ್ದಾರೆ. ನಿನ್ನೆ ಮಗುವಿನ ತೊಟ್ಟಿಲು ಶಾಸ್ತ್ರ ನಡೆದಿದ್ದು, ಮೊದಲ ಬಾರಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದಾರೆ.
ಮೇಘನಾ ಸಿನಿಮಾ ಹಿನ್ನಲೆಯಿರುವ ಕುಟುಂಬದಿಂದ ಬಂದವರು. ಹಾಗಾಗಿ ಅವರು ಮತ್ತೆ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಇದಕ್ಕೆ ಮೇಘನಾ, 'ಸದ್ಯಕ್ಕೆ ನನ್ನ ಗಮನ ಮಗನ ಮೇಲಿದೆ. ಮುಂದೆ ಸಿನಿಮಾಗೆ ಬರ್ತೀನಿ' ಎಂದಿದ್ದಾರೆ.