KCC League: 365 ದಿನದಲ್ಲಿ 363 ದಿನ ಕೆಲಸ ಮಾಡೋ ನಟ ಶಿವಣ್ಣನ ಸಂದರ್ಶನ ಮಾಡಿದ ಕಿಚ್ಚ ಸುದೀಪ್.!

Feb 22, 2023, 7:39 PM IST

ಬೆಂಗಳೂರು (ಫೆ.22): ಸ್ಯಾಂಡಲ್‌ವುಡ್‌ನ ಕರ್ನಾಟಕ ಚಲನಚಿತ್ರ ಕಪ್‌ (ಕೆಸಿಸಿ)ನಲ್ಲಿ ಪಾಲ್ಗೊಳ್ಳಲು ಬಂದಿದ್ದ ನಟ ಡಾ. ಶಿವರಾಜ್‌ ಕುಮಾರ್‌ ಅವರನ್ನು ಮತ್ತೊಬ್ಬ ನಟ ಕಿಚ್ಚ ಸುದೀಪ್‌ ಅವರು ಸಂದರ್ಶನ ಮಾಡಿದ್ದಾರೆ. ಈ ವೇಳೆ 365 ದಿನದಲ್ಲಿ 363 ದಿನ ಕೆಲಸ ಮಾಡೋ ನಟ ಶಿವಣ್ಣ ಎಂದು ಉಲ್ಲೇಖ ಮಾಡಿದ್ದಾರೆ. 

ಮುಂದಿನ ಕೆಸಿಸಿಯಲ್ಲಿ ಒಂದು ತಂಡಕ್ಕೆ ಕೇವಲ 2 ಪಂದ್ಯಗಳು ಮಾತ್ರ ಇದ್ದು, ಅದನ್ನು ಮುಂದಿನ ಸೀಸನ್‌ ವೇಳೆಗೆ 4 ಪಂದ್ಯಗಳಿಗೆ ಏರಿಕೆ ಮಾಡಲು ಚರ್ಚೆ ಮಾಡಲಾಗಿದೆ. ಸಿನಿಮಾ ಎಂದು ಬಂದಾಗ ಚಲನಚಿತ್ರದ ಎಲ್ಲ ವರ್ಗದವರೂ ಇಲ್ಲಿ ಆಟವಾಡಲು ಬರುತ್ತಿದ್ದಾರೆ. ಇಲ್ಲಿ ಆಟವಾಡಲು ಬಂದಾಗ ದೇಹದ ಎಲ್ಲ ಅಂಗಾಂಗಗಳು ಕೂಡ ಕೆಲಸ ಮಾಡಬೇಕು. ಒಂದು ಲೈಟ್‌ ಹಾಕಲು, ಆಟವಾಡಲು, ಮೈದಾನಕ್ಕೆ, ಜನರನ್ನು ಸೇರಿಸಲು ಎಲ್ಲದನ್ನೂ ನುರೆಂಟು ಅನುಮತಿಗಳು ಬೇಕು. ಆದರೆ, ಇಲ್ಲಿನ ಕಾರ್ಯಗಳ ಒತ್ತಡದಿಂದಾಗಿ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (ಸಿಸಿಎಲ್‌) ಗೆ ಹೋಗಲಾಗುತ್ತಿಲ್ಲ. ಸಿಸಿಎಲ್‌ ನಲ್ಲಿ ಎಲ್ಲರೂ ತುಂಬಾ ಚೆನ್ನಾಗಿ ಕ್ರಿಕೆಟ್‌ ಆಡುತ್ತಿದ್ದಾರೆ. ಆದರೆ, ಹೆಚ್ಚು ಸಮಯ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿಕೊಂಡರು.