Dec 30, 2024, 3:49 PM IST
ಬೆಂಗಳೂರು: ಕಿರುತೆರೆ ನಟ ಚರಿತ್ ಬಾಳಪ್ಪ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಶೂಟಿಂಗ್ ಸೆಟ್‌ನಲ್ಲಿಯೇ ಗರ್ಲ್‌ಫ್ರೆಂಡ್‌ಗಳ ಜತೆ ಲವ್ವಿಡವ್ವಿ ನಡೆಸುತ್ತಿದ್ದನೆಂಬ ಆರೋಪ ಕೇಳಿ ಬಂದಿದೆ. ಇದಷ್ಟೇ ಅಲ್ಲದೇ ಹಲವು ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಈತನ ಮೇಲೆ ಕೇಳಿ ಬಂದಿದೆ.
ಇನ್ನು ಸೀರಿಯಲ್‌ನಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಈ ಚರಿತ್ ಬಾಳಪ್ಪ ಮಂಚಕ್ಕೆ ಕರೆಯುತ್ತಿದ್ದನು. ನನಗೆ ಮೋಸ ಮಾಡಿದ್ರೆ ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ಥೆಯೊಬ್ಬರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವಷ್ಟೇ ಈತನ ಬಂಡವಾಳ ಬೆಳಕಿಗೆ ಬಂದಿದೆ.