ಶೂಟಿಂಗ್ ವೇಳೆ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಲ್ಲದೆ, ಶೂಟಿಂಗ್ ಸ್ಥಳದಲ್ಲೇ ಚಂದನ್ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಚಂದನ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಬೆಂಗಳೂರು (ಆ.1): ಹೈದ್ರಾಬಾದ್‌ನಲ್ಲಿ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿಯ ಶೂಟಿಂಗ್ ವೇಳೆ ಕನ್ನಡದ ಜನಪ್ರತಿಯ ಕಿರುತೆರೆ ನಟ ಚಂದನ್ ಕುಮಾರ್‌ಗೆ ಕಪಾಳ ಮೋಕ್ಷ ಮಾಡಲಾಗಿದೆ. ಈ ಕುರಿತಂತೆ ಸ್ವತಃ ಚಂದನ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಅವಮಾನ ಮಾಡುವ ಏಕೈಕ ಉದ್ದೇಶ ಅವರಲ್ಲಿತ್ತು ಎಂದು ಹೇಳಿದ್ದಾರೆ.
ಅವರು ಆರೋಪಿಸಿರುವ ಹಾಗೆ ನಾನು ಅಮ್ಮ ಎನ್ನುವ ಪದವನ್ನೆಲ್ಲಾ ಬಳಸಿ ಬೈದಿಲ್ಲ. ನನ್ನ ತಾಯಿಗೆ ಆದ ಪರಿಸ್ಥಿತಿ ನಿನ್ನ ತಾಯಿಗೂ ಆದರೇ ಸುಮ್ಮನಿರ್ತಿದ್ಯಾ ಎಂದು ತೆಲುಗಿನಲ್ಲಿಯೇ ಕೇಳಿದ್ದೆ. ಈ ವಿಡಿಯೋದಲ್ಲಿ ಅವರಿಗೆ ಬೇಕಾದ ಅಂಶವನ್ನು ಮಾತ್ರ ಕಟ್ ಮಾಡಿ ಆರೋಪ ಮಾಡಿದ್ದಾರೆ. ಒಟ್ಟಾರೆ ಇಡೀ ಚಿತ್ರೀಕರಣದ ವೇಳೆ ಸಾಕಷ್ಟು ಇಂಥ ಘಟನೆಗಳು ನಡೆದಿದ್ದವು ಎನ್ನುವುದನ್ನು ಚಂದನ್ ಕುಮಾರ್ ಬಹಿರಂಗಪಡಿಸಿದ್ದಾರೆ.
ತೆಲುಗು ಧಾರಾವಾಹಿ ಸೆಟ್‌ಲ್ಲಿ ಕನ್ನಡದ ನಟ ಚಂದನ್ ಮೇಲೆ ಹಲ್ಲೆ; ವಿಡಿಯೋ ವೈರಲ್
ಬೆಳಗ್ಗೆ ಎದ್ದು ನ್ಯೂಸ್ ನೋಡಿ ಶಾಕ್ ಆಯ್ತು. ಖುಷಿಯ ವಿಚಾರ ತಾಯಿ ಹುಷಾರ್ ಆಗಿದ್ದಾರೆ. ಹೈದ್ರಾಬಾದ್ ನಡೆದಿದ್ದ ಘಟನೆಯನ್ನು ನಾನು ಅಲ್ಲೆ ಬಿಟ್ಟಿದ್ದೆ. ಒಬ್ಬ ಕನ್ನಡ ನಟನಿಗೆ ಹೊಡೆದಿದ್ದಾರೆ. ಎಲ್ಲರೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ, ಹೊರಗಿನ ನಟರನ್ನ ಕರೆಸಿ ನಾವು ಹಾಗೆ ಮಾಡಿದ್ರೆ ತಪ್ಪು. ನನ್ನ ಅವರೆಲ್ಲ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದು ಚಂದನ್ ಹೇಳಿದ್ದಾರೆ. ಮಾತುಕತೆ ಏನ್ ಬೇಕಾದ್ರು ಮಾತನಾಡಲಿ. ಮ್ಯಾನ್ ಹ್ಯಾಂಡ್ಲಿಂಗ್ ಮಾಡೋದೇನಿತ್ತು. ಸೀರಿಯಲ್ ಟೀಮ್ ನಲ್ಲಿ ಎಲ್ಲರೂ ಚೆನ್ನಾಗಿದ್ದರು. ಅದ್ಯಾಕೆ ಹೀಗೆ ವರ್ತಿಸಿದ್ದಾರೋ ನನಗೆ ಗೊತ್ತಿಲ್ಲ ಎಂದಿದ್ದಾರೆ.