ದೇಶಾದ್ಯಂದ ಚರ್ಚೆಯ ವಿಷಯವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಭೇರಿ ಬಾರಿಸಿದ್ದಾರೆ. ಆ ಮೂಲಕ ಸುಮಲತಾ ಭಾರತೀಯ ರಾಜಕೀಯ ಇತಿಹಾಸದಲ್ಲಿ ಮೂರು ದಾಖಲೆಗಳನ್ನು ಬರೆದಿದ್ದಾರೆ. ಮಂಡ್ಯದಿಂದ ಆಯ್ಕೆಯಾದ ಮೊದಲ ಪಕ್ಷೇತರ ಅಭ್ಯರ್ಥಿ, ರಾಜ್ಯದಲ್ಲಿ ಕಳೆದ 52 ವರ್ಷದಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಆಯ್ಕೆಯಾದ ಮಹಿಳಾ ಸಂಸದೆ, ಹಾಗೂ ದೇಶದಲ್ಲಿ ಮೊದಲ ಮಹಿಳಾ ಪಕ್ಷೇತರ ಸಂಸದೆ ಸುಮಲತಾ ಆಗಿದ್ದಾರೆ