ಮಂದಿರ, ಮಸೀದಿ, ಚರ್ಚ್‌ಗೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದ ಪ್ರಕಾಶ್ ರಾಜ್

Published : Mar 22, 2019, 05:01 PM ISTUpdated : Mar 22, 2019, 05:12 PM IST
ಮಂದಿರ, ಮಸೀದಿ, ಚರ್ಚ್‌ಗೆ ಭೇಟಿ ನೀಡಿ ನಾಮಪತ್ರ ಸಲ್ಲಿಸಿದ ಪ್ರಕಾಶ್ ರಾಜ್

ಸಾರಾಂಶ

ಬೆಂಗಳೂರು ಕೇಂದ್ರದ  ಸ್ವತಂತ್ರ ಅಭ್ಯರ್ಥಿಯಾಗಿ ನಟ, ನಿರ್ದೇಶಕ ಪ್ರಕಾಶ್ ರಾಜ್ ನಾಮಪತ್ರ ಸಲ್ಲಿಸಿದ್ದಾರೆ.  ನಾಮಪತ್ರ ಸಲ್ಲಿಕೆಗೂ ಮುನ್ನ ಮಂದಿರ, ಮಸೀದಿ, ಚರ್ಚ್ ಗೆ ಭೇಟಿ ನೀಡಿದ ಪ್ರಕಾರ್ ರಾಜ್ ಆಶೀರ್ವಾದ ಪಡೆದರು.

ಬೆಂಗಳೂರು[ಮಾ. 22] ನಟನೆ ವೃತ್ತಿ. ರಾಜಕಾರಣ ಬದುಕಿನ ವಿಧಾನ.. ಇಲ್ಲಿ ಯಾರೂ ರಾಜರಿಲ್ಲ, ಇಲ್ಲಿ ಯಾರು ಚರ್ಕವರ್ತಿಗಳು ?.. ಹೀಗಂತ ಪ್ರಶ್ನೆ ಮಾಡಿದ್ದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಕಾಶ್ ರಾಜ್.

ಆ  ಕುಟುಂಬದವರನ್ನ ಆಯ್ಕೆ ಮಾಡಿ. ಈ ಜಾತಿಯವರನ್ನ ಆಯ್ಕೆ ಮಾಡಿ ಇದೆಲ್ಲಾ ಏನು..? ಜನರ ಧ್ವನಿಯಾಗುವವರನ್ನ ಆಯ್ಕೆ ಮಾಡಿ ಅಂತ ಕೇಳಿಕೊಳ್ಳುತ್ತಿದ್ದೇನೆ ಅಂತ ಪ್ರಕಾಶ್ ರಾಜ್ ಹೇಳಿದ್ರು‌. ಇದು ಯಾರ ಭದ್ರಕೋಟೆಯೂ ಅಲ್ಲ. ಹಿಂದಿನ ಸಂಸದರ ರಿಪೋರ್ಟ್ ಕಾರ್ಡ್ ಇದೆ ಜನ ನೋಡ್ತಾರೆ. ಅವರೇ ತೀರ್ಮಾನಿಸ್ತಾರೆ ಅಂತ ಪ್ರಕಾಶ್ ರಾಜ್ ಹೇಳಿದರು.

ಪ್ರಕಾಶ್ ರಾಜ್ ನಾಮಪತ್ರ ಸಲ್ಲಿಕೆಗೆ ಬೆಳಗ್ಗೆಯೆ ಮೆರವಣಿಗೆ ಹೊರಡಬೇಕಾಗಿತ್ತು. ಆದರೆ ಕಾರ್ಯಕರ್ತರು ಸೇರದೆ ವಿಳಂಬವಾಯಿತು.

 

 

 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!