ಇದು ಊಹೆಗೆ ಮೀರಿದ್ದು! ರೆಬೆಲ್ ಸುಮಲತಾಗೆ ಮಂಡ್ಯ ಕಣದಲ್ಲಿ ಶಾಕ್

Mar 26, 2019, 5:36 PM IST

ಸುಮಲತಾ ಹೆಸರಿನ 3 ನಾಮಪತ್ರ: ಮತದಾರರಲ್ಲಿ ಗೊಂದಲ ಸೃಷ್ಟಿಸಲು ದಳಪತಿಗಳು, ಸುಮಲತಾ ಹೆಸರಿನ ಮೂವರಿದಂದ ನಾಮಪತ್ರ ಹಾಕಿಸಿ ಸುಮಲತಾ ಅಂಬರೀಶ್ ಗೆ ಶಾಕ್ ಕೊಟ್ಟಿದ್ದಾರೆ.  ಕನಕಪುರ ಮೂಲದ ಪಿ.ಸುಮಲತಾ, ಕೆ.ಆರ್. ಪೇಟೆ ತಾಲೂಕಿನ ಸುಮಲತಾ, ಶ್ರೀರಂಗಪಟ್ಟಣದ ಸುಮಲತಾ ಎಂಬುವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ದಾರೆ. ಈ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡುವುದು ಜೆಡಿಎಸ್ ಮಾಸ್ಟರ್ ಪ್ಲಾನ್ ಇದಾಗಿದೆ ಎಂದು ಹೇಳಲಾಗುತ್ತಿದೆ.