ಹಿಜಾಬ್‌ಗೆ ಅವಕಾಶ ನೀಡದ್ದಕ್ಕೆ, ಪರೀಕ್ಷೆ ಬರೆಯದೇ ವಾಪಾಸಾದ  ವಿದ್ಯಾರ್ಥಿನಿ!

ಹಿಜಾಬ್‌ಗೆ ಅವಕಾಶ ನೀಡದ್ದಕ್ಕೆ, ಪರೀಕ್ಷೆ ಬರೆಯದೇ ವಾಪಾಸಾದ ವಿದ್ಯಾರ್ಥಿನಿ!

Published : Mar 28, 2022, 02:08 PM IST

ಶಿವಮೊಗ್ಗದಲ್ಲಿ ಹಿಜಾಬ್‌ಗೆ ಅವಕಾಶ ನಿರಾಕರಣೆ, ಪರೀಕ್ಷೆ ಬರೆಯದೇ ವಾಪಾಸಾದ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಹುಬ್ಬಳ್ಳಿಯಲ್ಲಿ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಣೆ.

ಶಿವಮೊಗ್ಗ/ಹುಬ್ಬಳ್ಳಿ (ಮಾ.28): ಹಿಜಾಬ್‌ (Hijab) ಇಲ್ಲದೆ SSLC ಪರೀಕ್ಷೆ ಬರೆಯಲ್ಲ ಎಂದು ವಿದ್ಯಾರ್ಥಿನಿ ಪರೀಕ್ಷೆ ಬರೆಯದೆ ಮನೆಗೆ ತೆರಳಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಇಲ್ಲಿನ ಕಸ್ತೂರಿ ಬಾ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿನಿ ತೆರಳಿದ್ದು, ಪೋಷಕರು, ಶಿಕ್ಷಕರು ಮನವೊಲಿಸಲು ಪ್ರಯತ್ನಿಸಿದ್ರು  ಅದಕ್ಕೆ ಬಗ್ಗದ ವಿದ್ಯಾರ್ಥಿನಿ ಪರೀಕ್ಷೆಯೇ ಬರೆಯಲ್ಲ ಎಂದು ಮನೆಗೆ ತೆರಳಲು ಮುಂದಾಗಿದ್ದಾಳೆ. ಬಳಿಕ ಕೊನೆ ಪ್ರಯತ್ನದ ಮನವೊಲಿಕೆ ಬಳಿಕ ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿದುಬಂದಿದೆ. 

SSLC ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು 

ಇನ್ನು ಹುಬ್ಬಳ್ಳಿಯ (Hubballi) ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಬುರ್ಖಾ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಿಸಲಾಗಿದೆ. ಸಮವಸ್ತ್ರದ ಬದಲು ವಿದ್ಯಾರ್ಥಿನಿಯರು ಬುರ್ಖಾ ಧರಿಸಿದ ಬಂದಿದ್ದರು. ಬಳಿಕ ಪೋಷಕರ ಜೊತೆಗೆ ಮನೆಗೆ ತೆರಳಿದ ವಿದ್ಯಾರ್ಥಿನಿ ಸಮವಸ್ತ್ರ ಧರಿಸಿ ಬಂದು ಪರೀಕ್ಷೆ ಬರೆದಿದ್ದಾರೆ. 

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
Read more