Hijab Row: ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ, ಹಿಜಾಬ್ ತೆಗೆಯಲ್ಲ, ಮುಂದುವರೆದ ಗದ್ದಲ

Hijab Row: ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ, ಹಿಜಾಬ್ ತೆಗೆಯಲ್ಲ, ಮುಂದುವರೆದ ಗದ್ದಲ

Published : Feb 16, 2022, 03:51 PM ISTUpdated : Feb 16, 2022, 05:25 PM IST

 ಸಮವಸ್ತ್ರ ನಿಯಮ ಇರುವ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ-ತೊಡುಗೆ ಧರಿಸುವಂತಿಲ್ಲ ಎಂಬ ಹೈಕೋರ್ಟ್‌ ಆದೇಶದ ಹೊರತಾಗಿಯೂ ಶಾಲೆ ಪುನಾರಂಭವಾದ 2ನೇ ದಿನ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ಬಂದಿದ್ದರಿಂದ ಗದ್ದಲ ಮುಂದುವರೆದಿದೆ. 

ಬೆಂಗಳೂರು (ಫೆ. 16):  ಸಮವಸ್ತ್ರ ನಿಯಮ ಇರುವ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ-ತೊಡುಗೆ ಧರಿಸುವಂತಿಲ್ಲ ಎಂಬ ಹೈಕೋರ್ಟ್‌ ಆದೇಶದ ಹೊರತಾಗಿಯೂ ಶಾಲೆ ಪುನಾರಂಭವಾದ 2ನೇ ದಿನ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿ ಬಂದಿದ್ದರಿಂದ ಗದ್ದಲ ಮುಂದುವರೆದಿದೆ. 

ಹಿಜಾಬ್‌ಪರ ವಿದ್ಯಾರ್ಥಿಗಳನ್ನು ಪೋಷಕರೂ ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಶಾಲೆ ಕಾಲೇಜುಗಳ 650ಕ್ಕೂ ಹೆಚ್ಚು ಮಕ್ಕಳು ತರಗತಿಗಳಿಗೆ ಗೈರು ಹಾಜರಾಗಿದ್ದಾರೆ. ಕಲಬುರಗಿ, ಶಿವಮೊಗ್ಗ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಸಹ ಬಹಿಷ್ಕರಿಸಿದ್ದಾರೆ. ಕೋರ್ಟ್‌ ಆದೇಶವಿದ್ದರೂ ನಾವು ಹಿಜಾಬ್‌ ಧರಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದಾರೆ. 

ಯಾದಗಿರಿ, ಮಂಡ್ಯ, ಕಲಬುರಗಿ, ಉಡುಪಿ ಜಿಲ್ಲೆಯ ಕಾಪು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪಳ ಸೇರಿ ಹಲವೆಡೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ನಡುವೆ ವಾಗ್ವಾದ, ಹೈಡ್ರಾಮಗಳು ಏರ್ಪಟ್ಟಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಯಚೂರು, ತುಮಕೂರು ಜಿಲ್ಲೆಗಳ 10ಕ್ಕೂ ಹೆಚ್ಚು ಕಡೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆಗಳನ್ನು ಸಹ ನಡೆಸಿದ್ದಾರೆ. ಅನೇಕ ಕಡೆಗಳಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more