Jun 16, 2020, 11:31 AM IST
ಬೆಂಗಳೂರು (ಜೂ. 16): ಸರ್ಕಾರದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಲಾಬಿ ನಡೆದಿದೆ. ಶಿಕ್ಷಕರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ! ಆದರೆ ಉಪನ್ಯಾಸಕರಿಗೆ ಕೊಡಲು ಸರ್ಕಾರದ ಬಳಿ ಲಕ್ಷ ಲಕ್ಷ ಹಣ ಬಿಡುಗಡೆ ಮಾಡಿದೆ. ಪದವಿ ಉಪನ್ಯಾಸಕರ ಲಾಬಿಯಿಂದ ಬಾಕಿ ವೇತನ ಭತ್ಯೆ ಬಿಡುಗಡೆಯಾಗಿದೆ.
6 ಸಾವಿರ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಉಪನ್ಯಾಸಕರಿಗೆ ವೇತನ ಭತ್ಯೆ ಬಿಡುಗಡೆಯಾಗಿದೆ. ಆದರೆ ಈ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!