Coronavirus Karnataka
Apr 9, 2020, 8:28 PM IST
ಬೆಂಗಳೂರು(ಏ. 09) ಇಂದು ಸಾಯಂಕಾಲ ಐದು ಗಂಟೆಯ ವರದಿಯಂತೆ ಕರ್ನಾಟಕದಲ್ಲಿ ಒಟ್ಟಾರೆ 197 ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಖಚಿತಗೊಂಡಿದೆ ಹಾಗೂ 30 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ನಾಗರೀಕರು ಸಾಮಾಜಿಕ ಅಂತರವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿನಂತಿಸುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಮಂಡ್ಯ: 'ನಮ್ಮನ್ನು ಮುಟ್ಟಿದರೆ ಕೊರೋನಾ ಬರುತ್ತೆ' ಬೆದರಿಕೆ ಹಾಕಿದ್ದ ಕಿಡಿಗೇಡಿಗಳ ಸೆರೆ...
ಗುರುವಾರ ಬೆಳಗ್ಗೆ 10 ಕೇಸ್ ಗಳು ದೃಢವಾಗಿದ್ದರೆ ಮಧ್ಯಾಹ್ನ ಮತ್ತೆ 6 ಕೇಸುಗಳು ಪತ್ತೆಯಾಗಿವೆ. ದೇಶವನ್ನೇ ಲಾಕ್ ಡೌನ್ ಮಾಡಿ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ನಾಗರಿಕರು ಇನ್ನೂ ಎಚ್ಚೆತ್ತುಕೊಳ್ಳದೇ ಇರುವುದು ದುರ್ದೈವ ಎಂದೇ ಹೇಳಬೇಕು .