Coronavirus Karnataka

ಬಾರ್ ಓಪನ್‌ಗೆ ಅನುಮತಿ ಕೊಡುವಂತೆ ಕೋರ್ಟ್ ಮೆಟ್ಟಿಲೇರಿದ ವೈದ್ಯ, ಸಿಕ್ಕಿದ್ದೇನು..?

Apr 7, 2020, 7:12 PM IST

ಬೆಂಗಳೂರು, (ಏ.07): ಕೊರೋನಾ ವೈರಸ್ ಹಾವಳಿ ಅತಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಹಾಕಲಾಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. 

ಲಾಕ್‌ಡೌನ್‌ ಎಫೆಕ್ಟ್‌: ಮದ್ಯ ಸಿಗದೆ ಮನೋರೋಗಿಗಳಾದ ಕುಡುಕರು!

ಈ ಹಿನ್ನೆಲೆಯಲ್ಲಿ ಎಣ್ಣೆ ಸಿಗದಿದ್ದಕ್ಕೆ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಡುಕರ ಹಿತದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿ ಎಂದು ಹೈಕೋರ್ಟ್ ಗೆ ಅರ್ಜಿ ಹಾಕಿದ್ದ ಹುಬ್ಬಳ್ಳಿ ಮೂಲದ ವೈದ್ಯರೊಬ್ಬರಿಗೆ ನ್ಯಾಯಾಲಯ ದಂಡ ವಿಧಿಸಿದೆ.