Ukraine Crisis: ಉಕ್ರೇನ್- ರಷ್ಯಾ ಯುದ್ಧದಿಂದ ಭಾರತಕ್ಕೆ ಹೊಸ ಸಂಕಷ್ಟ!

Mar 8, 2022, 3:24 PM IST

ಕೀವ್‌(ಮಾ.08): ಉಕ್ರೇನ್‌ ಮೇಲಿನ ರಷ್ಯಾ ದಾಳಿಯಿಂದ ಆರಂಭವಾಗಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಿಯೋಗಗಳು ಸೋಮವಾರ 3ನೇ ಸುತ್ತಿನ ಶಾಂತಿ ಮಾತುಕತೆ ಆರಂಭಿಸಿವೆ. ಈ ವೇಳೆ ಉಕ್ರೇನ್‌ಗೆ ರಷ್ಯಾ ನಾಲ್ಕು ಷರತ್ತುಗಳನ್ನು ಹಾಕಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದ ಮಾತುಕತೆಯಲ್ಲಿ ಉಭಯ ದೇಶಗಳು ಪರಸ್ಪರ ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಸಂಧಾನ ಮಾತುಕತೆ ವಿಫಲವಾಗಿತ್ತು. ಎರಡನೇ ಮಾತುಕತೆಯ ವೇಳೆ ಉಕ್ರೇನ್‌ ವಿಧಿಸಿದ್ದ ಷರತ್ತುಗಳಿಗೆ ರಷ್ಯಾ ಒಪ್ಪಿಗೆ ನೀಡದಿದ್ದರೂ, ನಾಗರಿಕರ ಸ್ಥಳಾಂತರ ವೇಳೆ ಕದನ ವಿರಾಮ ಘೋಷಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಆದರೆ ಮರಿಯುಪೋಲ್‌ನಲ್ಲಿ ರಷ್ಯಾ ನಡೆಸಿದ ದಾಳಿಯಿಂದಾಗಿ ಈ ಒಪ್ಪಂದವು ಮುರಿದುಬಿದ್ದಿತ್ತು.