Feb 10, 2021, 6:13 PM IST
ಬೆಂಗಳೂರು(ಫೆ.10): ರಾಜ್ಯ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗೆ ಅವಕಾಶವಿಲ್ಲ. ಕೊರೋನಾ ಹೊಡೆತದಿಂದ ಕುಸಿದಿರುವ ಆರ್ಥಕತೆ ಮೇಲೆತ್ತಲು ಕಸರತ್ತು ನಡೆಯುತ್ತಿದೆ. ಹೀಗಾಗಿ ಆರ್ಥಿಕ ಹೊರೆ ಸರಿದೂಗಿಸುವ ನಿಟ್ಟಿನಲ್ಲಿ ಈ ಬಾರಿ ಹೊಸ ಯೋಜನೆಗಳಿಗೆ ಅವಕಾಶ ಇರಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ.
ಜನಪ್ರಿಯ ಯೋಜನೆಗಳಿಗೆ ಕತ್ತರಿ ಬೀಳುವ ಅನುಮಾನ ವ್ಯಕ್ತವಾಗಿದ್ದು, ಹಳೇ ಯೋಜನೆಗಳ ಅನುದಾನವೂ ಕಡಿತಗೊಳ್ಳುವ ಸಾಧ್ಯತೆ ಇದೆ.
ಮಾಜಿ ಸಿಎಂ ಕುಮಾರಸ್ವಾಮಿ ಜಾರಿಗೊಳಿಸಿದ ಬಡವರ ಬಂಧು ಯೋಜನೆಗೂ ಬ್ರೇಕ್ ಬೀಳಬಹುದೆಂದು ಅಂದಾಜಿಸಲಾಗಿದೆ. ಜೊತೆಗೆ ಆಕಸ್ಮಿಕವಾಗಿ ಮೃತಪಟ್ಟ ಕುರಿ, ಹಸುಗಳಿಗೆ ನೀಡುವ ಪರಿಹಾರವೂ ರದ್ದಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇಷ್ಟೇ ಅಲ್ಲದೇ ಇನ್ಯಾವ ಯೋಜನೆಗಳಿಗೆ ಬ್ರೇಕ್ ಬೀಳುತ್ತೆ? ಇಲ್ಲಿದೆ ವಿವರ