Feb 1, 2023, 10:40 PM IST
ಈ ಬಾರಿಯ ಬಜೆಟ್ ಗಾತ್ರ 45,03,097 ಲಕ್ಷ ಕೋಟಿ ರೂಪಾಯಿ. ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆಗಳನ್ನಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಜನಪ್ರಿಯ ಘೋಷಣೆಗಳಿಲ್ಲದೆ, ಆರ್ಥಿಕ ಚೇತರಿಕೆಗೆ ಪೂರಕವಾದ ಬಜೆಟ್ ಇದಾಗಿದ್ದು, ಮಧ್ಯಮ ವರ್ಗಕ್ಕೆ ಬಂಪರ್ ಕೂಡುಗೆ ನೀಡಲಾಗಿದೆ. ಕರ್ನಾಟಕ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. 5 ಲಕ್ಷ 57 ಸಾವಿರ 27 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಈ ಯೋಜನೆ ಒಟ್ಟು ವೆಚ್ಚ 23,000 ಕೋಟಿ ರೂಪಾಯಿ ವೆಚ್ಚ. ಇದರ ಜೊತೆಗೆ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ರಕ್ಷಣಾ ಕ್ಷೇತ್ರ, ಆಹಾರ ಪೂರೈಕೆ, ಗೃಹ ಇಲಾಖೆ ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಎಷ್ಟು? ಹೊಸ ಘೋಷಣೆ, ಹೊಸ ಯೋಜನೆಗಳೇನು? ಮಧ್ಯಮ ವರ್ಗಕ್ಕೆ ನೀಡಿದ ಕೊಡುಗೆ ಏನು?