ಅದಾನಿ ಕಂಪನಿ ಸಾಲದ ಹಿಂದಿರೋ ಅಸಲಿ ಕಹಾನಿ!

Feb 3, 2023, 4:55 PM IST

ನವದೆಹಲಿ (ಫೆ.3): ಹಿಂಡೆನ್‌ಬರ್ಗ್‌ ರಿಸರ್ಚ್‌ನ ಒಂದೇ ಒಂದು ವರದಿ ಇಡೀ ಅದಾನಿ ಸಾಮ್ರಾಜ್ಯಕ್ಕೆ ಶಾಪವಾದಂತಾಗಿದೆ. ಹಿಂಡೆನ್‌ಬರ್ಗ್‌ ಮಾಡಿರುವ ವರದಿ ಅದಾನಿ ಕಂಪನಿ ವಿರುದ್ಧವೂ, ಅಥವಾ ಇಂಡಿಯಾ ವಿರುದ್ಧವೋ ಎನ್ನುವ ಅನುಮಾನಗಳಿರುವಾಗಲೇ, ಪ್ರತಿದಿನವೂ ಅದಾನಿ ಸಾಮ್ರಾಜ್ಯ ಷೇರು ಮಾರುಕಟ್ಟೆಯಲ್ಲಿ ಕರಗಿ ಹೋಗುತ್ತಿದೆ. ಅದಾನಿ ಕಂಪನಿ ಮಾಡಿರುವ ಸಾಲ, ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಬೆಲೆಗಳನ್ನು ಏರಿಸಲು ಮಾಡಿರುವ ಪ್ರಯತ್ನದ ಸಂಚಿನ ಬಗ್ಗೆ ಹಿಂಡೆನ್‌ಬರ್ಗ್‌ ವರದಿ ನೀಡಿತ್ಉತ. ಇದಕ್ಕೆ 413  ಪುಟಗಳ ತಿರುಗೇಟನ್ನೂ ಅದಾನಿ ಕಂಪನಿ ನೀಡಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಹಿಂಡನ್ಬರ್ಗ್ ವರದಿಯಿಂದ, ಅದಾನಿಗೇನೋ ನಷ್ಟವಾಯ್ತು, ಆದ್ರೆ ದೇಶಕ್ಕೆ ಪ್ರಯೋಜನವಾಯ್ತಾ..? ಇದರಿಂದ  ಲಾಭ ಯಾರಿಗೆ, ನಷ್ಟ ಯಾರಿಗೆ ಅನ್ನೋ ಪ್ರಶ್ನೆಗಳೆದ್ದಿವೆ. ಯಾಕೆಂದರೆ, ಅದಾನಿ ಕಂಪನಿಯ ಷೇರುಗಳ ಮೇಲೆ ಎಲ್‌ಐಸಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹೂಡಿಕೆ ಇದೆ. ಅದರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

ಅದಾನಿ ಗ್ರೂಪ್‌ಗೆ ಎಷ್ಟು ಸಾಲ ನೀಡಿದ್ದೀರಿ ಎನ್ನುವ ಮಾಹಿತಿ ಕೇಳಿದ ಆರ್‌ಬಿಐ!

ಅದಾನಿ ಷೇರು ಸುಧಾರಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕು ಅನ್ನೋದು ಗೊತ್ತಿಲ್ಲ. ಆದರೆ, ಅದಾನಿ ಮಾತ್ರ ಸಿರಿವಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಅದಾನಿ ಇದ್ದ ಸ್ಥಾನವನ್ನು ಅಂಬಾನಿ ಆಕ್ರಮಿಸಿಕೊಂಡಿದ್ದಾರೆ. ಅದಾನಿ ಷೇರುಗಳು ಕುಸಿತಾ ಇರೋದ್ರಿಂದ, ದೇಶದ ಅನೇಕ ಮಂದಿಗೆ ಇದರ ಬಗ್ಗೆ ಕಾಳಜಿ ಇದೆ.. ಕಳವಳವೂ ಇದೆ.