ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಬಜೆಟ್ ನಲ್ಲಿ ಏನುಂಟು ಏನಿಲ್ಲ ಎನ್ನುವುದರ ವಿಶ್ಲೇಷಣೆ
ಆರ್ಥಿಕತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇರುವ ಬಜೆಟ್
ಬೆಂಗಳೂರು (ಫೆ. 1): ಯಾವುದೇ ಜನಪ್ರಿಯ ಘೋಷಣೆಗಳಿಲ್ಲದೆ, ಸಂಪೂರ್ಣ ತರ್ಕಬದ್ಧವಾಗಿ ಮಂಡಿಸಿರುವ ಬಜೆಟ್ ಗೆ (Union Budget 2022) ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದೆ. ಎಂದಿನಂತೆ ಪ್ರತಿಪಕ್ಷಗಳು ಯಾವುದೇ ಯೋಜನೆಗಳಿಲ್ಲದ ಬಜೆಟ್ ಎಂದು ಹೇಳಿದ್ದರೆ, ಬಿಜೆಪಿ (BJP) ಮಾತ್ರ ತನ್ನ ಬಜೆಟ್ ನ ಬಗ್ಗೆ ಅದರಿಂದಾಗುವ ಲಾಭಗಳ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನದಲ್ಲಿದೆ. ಈ ನಡುವೆ ಪ್ರಧಾನಿ ಮೋದಿ (PM Modi)ನಾಳೆ ಬೆಳಗ್ಗೆ 11 ಗಂಟೆಗೆ ಬಜೆಟ್ ನ ಬಗ್ಗೆ ವಿಸ್ತ್ರತವಾಗಿ ಮಾತನಾಡಲಿರುವುದು ಇನ್ನಷ್ಟು ಆಳವಾಗಿ ಇದನ್ನು ತಿಳಿಯಲು ಸಾಧ್ಯವಾಗಲಿದೆ.
ಬಜೆಟ್ ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಜಿಎಸ್ ಟಿ (GST) ಸಂಗ್ರಹಣೆಯಲ್ಲಿ ಆಗುತ್ತಿರುವ ಏರಿಕೆ ಇದರಿಂದ ರಾಜ್ಯಗಳಿಗೆ ಆಗಲಿರುವ ಲಾಭದ ಬಗ್ಗೆ ಸಂಪೂರ್ಣವಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ. ಆರ್ ಬಿಐನಿಂದ ಹೊಸ ಡಿಜಿಟಲ್ ಕರೆನ್ಸಿ ಹೊರಬರುವುದು ಬಜೆಟ್ ನ ಮೂಲಕ ಅಧಿಕೃತವಾಗಿದೆ. ಡಿಜಿಟಲ್ ಆಸ್ತಿಗಳ ಮಾರಾಟಕ್ಕೆ ಸರ್ಕಾರ ಶೇ. 30ರಷ್ಟು ತೆರಿಗೆ ವಿಧಿಸುವುದು ಕ್ರಿಪ್ಟೋ ಕರೆನ್ಸಿ ಗ್ರಾಹಕರ ನಿದ್ದೆಗೆಡಿಸಿದೆ. ಕೇಂದ್ರ ಸರ್ಕಾರ ನೀಡಿರುವ ಬಜೆಟ್ ನ ಅಮೂಲಾಗ್ರ ವಿಶ್ಲೇಷಣೆ ಇನ್ನಷ್ಟೇ ಆಗಬೇಕಿದೆ.