ಬೆಂಗಳೂರು ಹೈಟೆಕ್ ನಗರ. ಇದರಿಂದ ಇಲ್ಲಿ ಹೈಟೆಕ್ ಪ್ರಕರಣಗಳು ಹೆಚ್ಚು. ಅದರಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಕುರಿತು ದೂರು ಸ್ವೀಕರಿಸುವ ಸೈಬರ್ ಪೊಲೀಸ್ ಠಾಣೆ ಜನರಿಗೆ ನ್ಯಾಯ ಒದಗಿಸಿದೆಯಾ? ಇಲ್ಲಿದೆ ವಿವರ.
ಬೆಂಗಳೂರು(ಜು.24): ಸದ್ಯ ಸೈಬರ್ ಪೊಲೀಸ್ ಠಾಣೆ ಹಾಗೂ ಸೈಬರ್ ಟ್ರಾಕ್ ಹೆಚ್ಚು ಶಕ್ತಿಯುತವಾಗಬೇಕು. ಕಾರಣ ಬಹುತೇಕ ಪ್ರಕರಣಗಳು ಇದೀಗ ಸೈಬರ್ ಮೂಲಕವೇ ನಡೆಯುತ್ತಿದೆ. ಆದರೆ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಿಂದ ಜನರಿಗೆ ನ್ಯಾಯ ಸಿಗುತ್ತಿಲ್ಲ. 2017ರಿಂದ ಇಲ್ಲೀವರೆಗೆ ಬಾಕಿ ಉಳಿದ 17265 ಕೇಸ್‌ಗೆ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ಇನ್ನು 13,767 ಕೇಸ್‌ಗೆ ಸಾಕ್ಷ್ಯಾಧಾರ ಕೊರತೆಯಿಂದ ಸಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ಪ್ರತಿ ದಿನ ಸರಾಸರಿ 50 ರಷ್ಟು ಕೇಸ್ ದಾಖಲಾಗುತ್ತಿದೆ. ಆದರೆ ಸಿಬ್ಬಂದಿಗಳು ದೂರು ಸ್ವೀಕರಿಸುತ್ತಿದ್ದಾರೆ. ಆದರೆ ತನಿಖೆಯೂ ನಡೆಯುತ್ತಿಲ್ಲ, ನ್ಯಾಯವೂ ಸಿಗುತ್ತಿಲ್ಲ. ಹೀಗಾಗಿ ಹೆಸರಿಗೆ ಮಾತ್ರ ಸೈಬರ್ ಪೊಲೀಸ್ ಠಾಣೆ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಆದರೆ ಪ್ರಕರಣದಲ್ಲಿ ಯಾರಿಗೂ ನ್ಯಾಯ ಸಿಗುತ್ತಿಲ್ಲ.