ಗೋಡೆ ಕೆಡವಬೇಕಾಗಿಲ್ಲ, ಜಾಗ ಬದಲಿಸೋದು ಬೇಡ, ದುಬೈನಲ್ಲಿ ಪರ್ಸನಲೈಸ್ಡ್ ವಾಸ್ತುಶಾಸ್ತ್ರಕ್ಕೆ ಹೆಚ್ಚಾಗ್ತಿದೆ ಬೇಡಿಕೆ

Published : Jan 11, 2026, 05:28 PM IST
Personalized Vastu

ಸಾರಾಂಶ

ಅಲ್ಲಿ ಗೋಡೆ ಕಟ್ಟಬಾರದು, ಇಲ್ಲಿ ಬಾಗಿಲು ಇರಬಾರದು ಎನ್ನುವ ಸಾರ್ವತ್ರಿಕ ವಾಸ್ತುಶಾಸ್ತ್ರವನ್ನು ಪಾಲಿಸೋದು ಕಷ್ಟ. ವೈಯಕ್ತಿಕವಾಗಿ ಏಳ್ಗೆ ಆಗ್ಬೇಕು ಅಂದ್ರೆ ಪರ್ಸನಲೈಸ್ಡ್ ವಾಸ್ತು ಆಪ್ತವಾಗುತ್ತೆ. ದುಬೈನಲ್ಲಿ ಶ್ರೀಮಂತರ ಫೆವರೆಟ್ ಪರ್ಸನಲೈಸ್ಡ್ ವಾಸ್ತು ಅಂದ್ರೆ ಏನು?

ದುಬೈ (Dubai) ಜನರ ವಾಸ್ತುಶಾಸ್ತ್ರದಲ್ಲಿನ ನಂಬಿಕೆ ಬದಲಾಗ್ತಿದೆ. ಸಾರ್ವತ್ರಿಕ ವಾಸ್ತುಶಾಸ್ತ್ರಕ್ಕಿಂತ ಅಲ್ಲಿನ ಜನರು ಪರ್ಸನಲೈಸ್ಡ್ ವಾಸ್ತು (Personalized Vastu)ವಿಗೆ ಆದ್ಯತೆ ನೀಡ್ತಿದ್ದಾರೆ. ದುಬೈ ಒಂದು ಬಹುರಾಷ್ಟ್ರೀಯ ನಗರ, ಭಾರತೀಯರು, ಅರಬ್, ಯುರೋಪಿಯನ್, ಆಫ್ರಿಕನ್ ಮತ್ತು ಏಷ್ಯನ್ ಸಮುದಾಯಗಳು ಇಲ್ಲಿ ಒಟ್ಟಿಗೆ ನೆಲೆಸಿವೆ. ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿ, ವೃತ್ತಿ, ಚಿಂತನೆ ಮತ್ತು ಎನರ್ಜಿ ಭಿನ್ನವಾಗಿದೆ. ಒಂದೇ ವಾಸ್ತು ತತ್ವವು ಎಲ್ಲರ ಮೇಲೆ ಸಮಾನವಾಗಿ ಪರಿಣಾಮ ಬೀರುವುದಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದೇ ಕಾರಣಕ್ಕೆ ಪರ್ಸನಲೈಸ್ಡ್ ವಾಸ್ತುಶಾಸ್ತ್ರಕ್ಕೆ ಮನ್ನಣೆ ನೀಡ್ತಿದ್ದಾರೆ.

ಪರ್ಸನಲೈಸ್ಡ್ ವಾಸ್ತು ಎಂದರೇನು? 

ಪರ್ಸನಲೈಸ್ಡ್ ವಾಸ್ತುವಿನಲ್ಲಿ, ಮನೆಗಳು, ಅಂಗಡಿಗಳು ಅಥವಾ ಕಚೇರಿಗಳನ್ನು ವ್ಯಕ್ತಿಯ ಜಾತಕ, ವೃತ್ತಿ, ಜೀವನ ಗುರಿಗಳು ಮತ್ತು ಚಿಂತನೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ. ಬ್ಯುಸಿನೆಸ್ ವಿಸ್ತರಣೆಯಿಂದ ಸಂಬಂಧ ಸಮತೋಲನ ಮತ್ತು ಆರೋಗ್ಯ ಚೇತರಿಕೆ ಮತ್ತು ಮಾನಸಿಕ ಶಾಂತಿಯವರೆಗೆ ಪ್ರತಿಯೊಬ್ಬರ ಆಸೆಗಳು ವಿಭಿನ್ನವಾಗಿವೆ. ಸಾಮಾನ್ಯೀಕೃತ ವಾಸ್ತು ಎಲ್ಲರಿಗೂ ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ವ್ಯಕ್ತಿಯ ಜಾತಕ ಮತ್ತು ಆಸೆಗಳನ್ನು ಆಧರಿಸಿ ವಾಸ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಜನವರಿ 17 ರಿಂದ ಈ ಮೂರು ರಾಶಿಗೆ ಉತ್ತಮ ದಿನ ಆರಂಭ, ಬಡ್ತಿ,ಲಾಭ ಪಕ್ಕಾ

ದುಬೈನಲ್ಲಿರುವ ವೃತ್ತಿಪರರು ಈಗ ತಮ್ಮ ಮನೆಗಳನ್ನು ಕೇವಲ ವಾಸಸ್ಥಳಗಳಾಗಿ ನೋಡ್ತಿಲ್ಲ. ವೃತ್ತಿ, ಹಣಕಾಸು ಮತ್ತು ಮಾನಸಿಕ ಸ್ಥಿರತೆಯನ್ನು ಬೆಂಬಲಿಸುವ ಶಕ್ತಿ ಸಾಧನಗಳಾಗಿ ನೋಡ್ತಿದ್ದಾರೆ, ಹಾಗಾಗಿ ಮನೆ ಖರೀದಿ ಅಥವಾ ಕಚೇರಿ ಆಯ್ಕೆ ವೇಳೆ ವಾಸ್ತುವನ್ನು ಗಮನಿಸ್ತಿದ್ದಾರೆ. ದುಬೈನಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ವಾಸ್ತುವನ್ನು ವಿನ್ಯಾಸಗೊಳಿಸಲಾಗುತ್ತಿದೆ.

ದುಬೈನಲ್ಲಿಪರ್ಸನಲೈಸ್ಡ್ ವಾಸ್ತುವಿನ ಏರಿಕೆಗೆ ಕಾರಣ ದುಬೈನ ರಿಯಲ್ ಎಸ್ಟೇಟ್ ರಚನೆ ಸಾಕಷ್ಟು ವಿಸ್ತಾರವಾಗಿರೋದು. ಇಲ್ಲಿ ಎತ್ತರದ ಅಪಾರ್ಟ್ಮೆಂಟ್ಗಳು, ಸ್ಕೈ ವಿಲ್ಲಾಗಳು ಮತ್ತು ಸ್ಮಾರ್ಟ್ ಮನೆಗಳು ಸಾಮಾನ್ಯವಾಗಿವೆ. ಅಲ್ಲಿ ಸಾಂಪ್ರದಾಯಿಕ ವಾಸ್ತು ತತ್ವಗಳು ನೇರವಾಗಿ ಅನ್ವಯಿಸುವುದಿಲ್ಲ. ಜಾಗ ಬದಲಿಸದೆ, ಕಟ್ಟಡ ಉರುಳಿಸಿದೆ, ಶಕ್ತಿಯಲ್ಲಿ ತಿದ್ದುಪಡಿ ಮಾಡುವ ಮೂಲಕ ವ್ಯಕ್ತಿಯ ಅಗತ್ಯಗಳನ್ನು ಅಥವಾ ಆಸೆಗಳನ್ನು ಪೂರೈಸುವ ತಜ್ಞರ ಕಡೆಗೆ ಜನರು ತಿರುಗುತ್ತಿದ್ದಾರೆ.

ದುಬೈನಲ್ಲಿ ವಾಸ್ತು ಇನ್ಮುಂದೆ ಧಾರ್ಮಿಕ ಸಂಪ್ರದಾಯವಲ್ಲ. ಬದಲಾಗಿ ಜೀವನ-ಆಪ್ಟಿಮೈಸೇಶನ್ ವಿಜ್ಞಾನವಾಗಿ ನೋಡಲಾಗುತ್ತದೆ. ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಬಾಲಿವುಡ್ ತಾರೆಯರಿಂದ ಹಿಡಿದು ಎಲ್ಲರೂ ಈಗ ಪರ್ಸನಲೈಸ್ಡ್ ವಾಸ್ತುವನ್ನು ಪಡೆಯುತ್ತಿದ್ದಾರೆ. ಅವರ ಭವಿಷ್ಯವಾಣಿಗಳು ಗ್ರಹಗಳು ಮತ್ತು ನಕ್ಷತ್ರಗಳಿಗೆ ಸೀಮಿತವಾಗಿಲ್ಲ, ಆದರೆ ವ್ಯಕ್ತಿಯ ಜೀವನ, ಕ್ರಿಯೆಗಳು ಮತ್ತು ಸಂದರ್ಭಗಳನ್ನು ಆಧರಿಸಿವೆ.

ಫೆಬ್ರವರಿಯಲ್ಲಿ 4 ಗ್ರಹದಿಂದ ನಾಲ್ಕು ದೊಡ್ಡ ರಾಜಯೋಗ, 3 ರಾಶಿಗೆ ಅದೃಷ್ಟ

ಜ್ಯೋತಿಷಿ ರಿತು ಸಿಂಗ್, ದುಬೈನಲ್ಲಾಗ್ತಿರುವ ಈ ವಾಸ್ತು ಬದಲಾವಣೆ ಬಗ್ಗೆ ವಿವರಿಸಿದ್ದಾರೆ. ಜ್ಯೋತಿಷಿ ರಿತು ಸಿಂಗ್, ಜನವರಿ 12 ರಿಂದ 16ರವರೆಗೆ ದುಬೈನಲ್ಲಿ ಅನೇಕ ಕಾರ್ಯಾಗಾರದ ಮೂಲಕ ಜ್ಯೋತಿಷ್ಯ, ವಾಸ್ತುಶಾಸ್ತ್ರದ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ವಾಸ್ತು ಮಾಸ್ಟರ್ ಪ್ಲಾನ್ ಅಭಿವೃದ್ಧಿಪಡಿಸಲು ದುಬೈನ ರಿಯಲ್ ಎಸ್ಟೇಟ್ ವಲಯದ ಪ್ರಸಿದ್ಧ ಉದ್ಯಮಿ ಪ್ರಿತೇಶ್ ಪಟೇಲ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ದುಬೈನಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ ಮತ್ತು ಆಸ್ಟ್ರೇಲಿಯಾದಲ್ಲಿಯೂ ಪರ್ಸನಲೈಸ್ಡ್ ವಾಸ್ತುವಿನ ಮೇಲೆ ಕೆಲಸ ನಡೆಯುತ್ತಿದೆ ಎಂದು ರೀತು ಸಿಂಗ್ ಹೇಳಿದ್ದಾರೆ. ಫಿಟ್ನೆಸ್ನಲ್ಲಿ ವೈಯಕ್ತಿಕ ತರಬೇತುದಾರ ಇರುವಂತೆ, ಆಹಾರದಲ್ಲಿ ಕಸ್ಟಮ್ ನ್ಯೂಟ್ರಿಷಿಯನ್ ಪ್ಲಾನ್ ಇರುವಂತೆ ಮನೆ ಮತ್ತು ಕಚೇರಿಗೆ ಪರ್ಸನಲೈಸ್ಡ್ ವಾಸ್ತು ನೀಲನಕ್ಷೆ ತಜ್ಞರ ಅವಶ್ಯಕತೆಯಿದೆ ಎಂದು ರೀತು ಸಿಂಗ್ ಹೇಳಿದ್ದಾರೆ. ಪರ್ಸನಲೈಸ್ಡ್ ವಾಸ್ತುಶಾಸ್ತ್ರಜ್ಞರಿಗೆ ದುಬೈನಲ್ಲಿ ಸಾಕಷ್ಟು ಅವಕಾಶವಿದೆ. ಮುಂದಿನ ದಿನಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚಾಗಲಿದೆ.

PREV
Read more Articles on
click me!

Recommended Stories

ಕಾಗೆಗಳಿಂದ ಸಸ್ಯಗಳ ತನಕ.. ಎಚ್ಚರಿಸುವ ಕೆಟ್ಟ ಶಕುನಗಳಿವು, ಆಗ ಏನು ಮಾಡಬೇಕು?
ಇದನ್ನ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ.. ಹಣಕ್ಕೆ ಎಂದಿಗೂ ಸಮಸ್ಯೆಯಾಗುವುದಿಲ್ಲ!