
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹಾಳುಬಿದ್ದ ಮನೆಗಳನ್ನು ತೋರಿಸುವಾಗ ಅಲ್ಲಿರುವ ಜೇಡರ ಬಲೆಗಳನ್ನು ತೋರಿಸುವುದು ರೂಢಿ. ಹಾಗಾದರೆ ಜೇಡರ ಬಲೆ ಇರುವ ಮನೆ ಪಾಳುಬೀಳುತ್ತದೆಯೇ? ಸ್ವಲ್ಪ ದಿನಗಳ ಕಾಲ ಮನೆಯನ್ನು ಸ್ವಚ್ಛಗೊಳಿಸದಿದ್ದರೆ, ಜೇಡಗಳು ಮನೆಯ ಚಾವಣಿ ಮತ್ತು ಮೂಲೆಗಳಲ್ಲಿ ಗೂಡು ಕಟ್ಟುತ್ತವೆ. ಜೇಡ ಮನೆಯಲ್ಲಿ ಗೂಡು ಕಟ್ಟುವುದು ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ವಿವರಿಸುತ್ತಾರೆ. ಅಲ್ಲಲ್ಲಿ ಜೇಡರ ಬಲೆಗಳಿದ್ದರೆ ಕುಟುಂಬ ಸದಸ್ಯರ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ.
ಜೇಡಗಳು ಮನೆಯಲ್ಲಿ ಬಲೆ ಹೆಣೆಯುವುದರಿಂದ ಹಣದ ಕೊರತೆ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಕೈಗೆತ್ತಿಕೊಂಡ ಕೆಲಸಕ್ಕೆ ವಿಘ್ನ ಎದುರಾಗುವುದು, ಕುಟುಂಬ ಸದಸ್ಯರು ಸೋಮಾರಿಗಳಾಗುವುದು ಸೇರಿದಂತೆ ನಕಾರಾತ್ಮಕ ಅಂಶಗಳು ಹೆಚ್ಚಾಗುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಜೇಡಗಳು ಮನೆಯ ಮೂಲೆಗಳಲ್ಲಿ, ಅಂದರೆ ಎರಡು ಗೋಡೆಗಳು ಸಂಧಿಸುವ ಸ್ಥಳದಲ್ಲಿ ಗೂಡು ಕಟ್ಟಿ ದರೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇರುವ ಹಣವನ್ನು ಕಳೆದುಕೊಳ್ಳಬಹುದು.
ಇದೇ ವೇಳೆ ದೇವರ ಮನೆಯಲ್ಲಿ ಜೇಡರ ಬಲೆ ಕಂಡರೆ ತಕ್ಷಣ ತೆಗೆದುಬಿಡಿ. ಇದು ದುರಾದೃಷ್ಟ ಹೆಚ್ಚುವ ಸಂಕೇತ. ಇದೇ ವೇಳೆ ದೇವರ ಚಿತ್ರ ಅಥವಾ ವಿಗ್ರಹಗಳು ಕೂಡಾ ಜೇಡರ ಬಲೆಗಳಿಂದ ಮುಕ್ತವಾಗಿರಬೇಕು. ವಾಸ್ತು ಪ್ರಕಾರ ಮನೆ ಗೋಡೆಯ ಮೇಲೆ ಜೇಡರ ಬಲೆ ಕಟ್ಟುವುದು ಮನೆಗೆ ಮತ್ತು ಮನೆಯವರಿಗೆ ಶುಭ ಸೂಚಕವಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಅಂಶವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಕುಟುಂಬ ಸದಸ್ಯರಲ್ಲಿ ಅನಾರೋಗ್ಯ, ಆರ್ಥಿಕ ಮುಗ್ಗಟ್ಟು ಹೆಚ್ಚಾಗಲಿದೆ ಎಂಬುದು ಸೂಚನೆ.
ಮಲಗುವ ಕೊಠಡಿಯಲ್ಲಿ ಜೇಡರ ಬಲೆ ಇದ್ದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಪತಿ-ಪತ್ನಿ ನಡುವೆ ಸದಾ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಹಾಗೆಯೇ ವಾಸ್ತು ಪ್ರಕಾರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಅತ್ಯಂತ ಪ್ರಮುಖವಾದ ಅಡುಗೆಮನೆಯಲ್ಲಿಯೂ ಜೇಡರ ಬಲೆ ಇರಬಾರದು. ಕಾಣಿಸಿದರೆ ತಕ್ಷಣ ಅವುಗಳನ್ನು ತೆಗೆದುಹಾಕಿ. ಇದರಿಂದ ಕುಟುಂಬದ ಸದಸ್ಯರು ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಕಿಚನ್‌ನಲ್ಲಿರುವ ಗ್ಯಾಸ್ ಮತ್ತು ಸಿಂಕ್ ಅಡಿಯಲ್ಲಿ ಆಗಾಗ ಸ್ವಚ್ಛಗೊಳಿಸುತ್ತಿರಬೇಕು.
ದೀರ್ಘ ಕಾಲದವರೆಗೆ ಮನೆಯ ಮೂಲೆಯಲ್ಲಿ ಜೇಡರ ಬಲೆ ಇದ್ದರೆ ಅದು ಕುಟುಂಬ ಸದಸ್ಯರಲ್ಲಿ ಆರ್ಥಿಕ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ತಮ್ಮಲ್ಲಿನ ಹಣವನ್ನು ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಆದ್ದರಿಂದ ದೀರ್ಘಕಾಲದಿಂದ ಮನೆಯ ಮೂಲೆಯಲ್ಲಿ ಜೇಡರ ಬಲೆ ಇದ್ದರೆ ಅದನ್ನು ತ್ವರಿತವಾಗಿ ಕ್ಲೀನ್ ಮಾಡುವುದು ಉತ್ತಮ.
ಮನೆಯಲ್ಲಿ ಜೇಡ ಗೂಡು ಕಟ್ಟಿದರೆ ವಾಸ್ತು ದೋಷ ಬರುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಇದು ಮನೆಯ ಮಕ್ಕಳ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಮೂಲೆಗಳು, ಚಾವಣಿ ನಿಯಮಿತವಾಗಿ ಸ್ವಚ್ಛಗೊಳಿಸಬೇಕು.