Astrology Tips: ಅದೃಷ್ಟವೇ ಬದಲಿಸುವ ಈ ರತ್ನ ಧರಿಸುವಾಗ ಹುಷಾರಾಗಿರಿ

By Suvarna News  |  First Published Jan 27, 2023, 10:16 AM IST

ನವರತ್ನಗಳು (Navarathna) ನವ ಗ್ರಹಗಳ(Planet) ಸಂಕೇತ ಎಂದು ಹೇಳಲಾಗುತ್ತದೆ. ಒಂದೊಂದು ಹರಳೂ ಅದರದೇ ಆದ ಶಕ್ತಿ ಹಾಗೂ ಗ್ರಹವನ್ನು ಅನುಸರಿಸುತ್ತದೆ. ಅದರಲ್ಲಿ ಹವಳ(Coral) ಸಹ ಬಹಳ ಮುಖವಾಗಿದೆ. ಈ ಹವಳವನ್ನು ಧರಿಸುವುದರಿಂದ ಬಹಳ ಲಾಭ ಹಾಗೂ ಬದುಕಿನ ಅದೃಷ್ಟವೇ ಬದಲಿಸುವ ಶಕ್ತಿ ಇದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹವಳ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ? ಹೇಗೆ ಧರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.


ಜ್ಯೋತಿಷ್ಯ ಶಾಸ್ತ್ರದ ಜಗತ್ತು ದೊಡ್ಡದಾಗಿದೆ. ಗ್ರಹಗಳನ್ನು(Planet) ನವರತ್ನಗಳ (Navarathna) ಕಲ್ಲಿನ (Stone) ಮೂಲಕ ಗುರುತಿಸಲಾಘುತ್ತದೆ. ಅದರಲ್ಲಿ ಕೆಂಪು ಹವಳ ಸಹ ಬಹಳ ಪ್ರಮುಖವಾಗಿದೆ. ಈ ಕೆಂಪು ಹವಳವು ಮಂಗಳ ಗ್ರಹದ(Planet Mars) ಸಂಕೇತವಾಗಿದೆ.  ಲಾಲ್ ಮೂಂಗ್ ಕಲ್ಲು(Lal Moong), ಪ್ರವಲ್(Prawal) ಎಂದೂ ಸಹ ಇದನ್ನು ಕರೆಯಲಾಗುತ್ತದೆ. ಕೆಂಪು ಹವಳವನ್ನು ಧರಿಸುವುದರಿಂದ ಶಕ್ತಿ(Energy), ಚೈತನ್ಯ ಮತ್ತು ಮಹತ್ವಾಕಾಂಕ್ಷೆಯನ್ನು ಕರುಣಿಸುತ್ತದೆ. 

ಭಾರತದಂತೆ ಕೆಂಪು ಹವಳಕ್ಕೆ ಬಹಳ ಪ್ರಮುಖ್ಯತೆ ಇದೆ. ರೋಮನ್ನರು(Roman) ಹವಳವನ್ನು ಅತ್ಯಂತ ಮಂಗಳಕರವೆAದು ಪರಿಗಣಿಸುತ್ತಾರೆ. ಅವರು ಇದನ್ನು ತಾಯತಗಳಲ್ಲಿ ಧರಿಸುತ್ತಾರೆ. ಮಂಗಳ ಗ್ರಹ ಎಂದರೆ ಅದು ಯುದ್ಧದ ದೇವರು(Lord of War) ಮತ್ತು ದೇವರ ಸೈನ್ಯದ ಕಮಾಂಡರ್(Army Commander of Lord) ಅನ್ನು ಸಂಕೇತಿಸುತ್ತದೆ. ಇದು ಸ್ಫೋಟಕ ಮತ್ತು ಪ್ರಕ್ಷÄಬ್ಧ ಶಕ್ತಿಯನ್ನು ಹೊಂದಿದೆ. ಕುಂಡಲಿಯಲ್ಲಿ ಮಂಗಳವು ಅನುಕೂಲಕರವಾಗಿಲ್ಲದಿದ್ದರೆ ಜ್ಯೋತಿಷಿಗಳು ಎಚ್ಚರದಿಂದ ಇರಲು ಹೆಳುತ್ತಾರೆ. ಅದಾಗ್ಯೂ ಮಂಗಳವು ಸ್ವಭಾವತಃ ದೋಷಪೂರಿತವಾಗಿದೆ ಎಂದೂ ಹೇಳಲಾಗುತ್ತದೆ. 

Tap to resize

Latest Videos

undefined

ಮಂಗಳನ 5 ಪರಿಣಾಮಗಳು

1. ತಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಕೇಂದ್ರೀಕರಿಸಲು ಹೆಣಗಾಡುವುದು.

2. ಕ್ರಮ ತೆಗೆದುಕೊಳ್ಳುವ ಸಾಮರ್ಥ್ಯದ ಕೊರತೆ.

3. ಚೈತನ್ಯ ಮತ್ತು ಧೈರ್ಯದ ಕೊರತೆ. 

4. ಉಪಕ್ರಮವನ್ನು ತೆಗೆದುಕೊಳ್ಳಲು ಹಿಂಜರಿಯುವುದು.

5. ಜೀವನದ ಪ್ರಮುಖ ಹಂತಗಳಲ್ಲಿ ವೈಫಲ್ಯ ಕಾಣುವುದು.

Gem Stones: ಯಾವ ಬಣ್ಣದ ರತ್ನ ಧರಿಸಿದ್ರೆ ಏನು ಲಾಭ?

ಸಮಸ್ಯೆ ಎದುರಾದಾಗ ಮಂಗಳ ಗ್ರಹದಿಂದ ಹೇಗೆ ದೂರ ಉಳಿಯಬಹುದು?: ಕೆಂಪು ಹವಳವನ್ನು ಹೇಗೆ ಬೇಕೋ ಹಾಗೆ ಬಳಸುವಂತಿಲ್ಲ. ಶಾಸ್ತçಜ್ಞರು ಹೇಳುವಂತೆ ಧರಿಸಬೇಕು. ಕ್ಯಾಪ್ಸುಲ್(Capsule) ಆಕಾರದ ಕೆಂಪು ಹವಳವನ್ನು ಧರಿಸುವುದರಿಂದ ಜಾತಕದಲ್ಲಿ ಮಂಗಳನ ಶಕ್ತಿಯನ್ನು ಹೆಚ್ಚಿಸಬಹುದು. ಇದನ್ನು ಸಾವಯವ ಕಲ್ಲು ಮತ್ತು ಗಣಿಗಾರಿಕೆಯಲ್ಲಿ(Maining), ಸಮುದ್ರದಿಂದ(Ocean) ಮಾನವರಿಗೆ ಅಮೂಲ್ಯ ಕೊಡುಗೆಯಾಗಿದೆ. ಮಾಂಗಲ್ಯದ ಬಲವನ್ನು ಹೆಚ್ಚಿಸಲು ಮಾಂಗಲ್ಯಕ್ಕೆ ಹವಳವನ್ನು ಹಾಕಲಾಗುತ್ತದೆ. ಅದರಂತೆ ಅನೇಕ ಪ್ರಯೋಜನಗಳಿದೆ.

1. ಕೆಂಪು ಹವಳ ಧರಿಸಿದವರ ದಾಂಪತ್ಯ ಜೀವನಕ್ಕೆ ಮತ್ತು ಸಂಗಾತಿಯ ದೀರ್ಘಾಯುಷ್ಯಕ್ಕೆ ಬಲ ನೀಡುತ್ತದೆ.

2. ಕ್ಯಾಪ್ಸುಲ್(Capsule) ಅಥವಾ ತ್ರಿಕೋನ(Triangle) ರತ್ನವನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಧೈರ್ಯ ನೀಡುತ್ತದೆ.

3. ದೈಹಿಕ ಆರೋಗ್ಯಕ್ಕಾಗಿ(Physical Health) ಮತ್ತು ಅಡೆತಡೆಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಇದು ಜಡ ಮನೋಭಾವವನ್ನು ತೆಗೆದುಹಾಕುತ್ತದೆ ಹಾಗೂ ಧನಾತ್ಮಕ ಶಕ್ತಿಯನ್ನು(Positive Energy) ನೀಡುತ್ತದೆ.

4. ಕೆಂಪು ಹವಳವು ಸಾಲಗಳಿಂದ(Loan) ಹೊರಬರಲು ಸಹಾಯ ಮಾಡುತ್ತದೆ. 

5. ಹವಳವು ಅಪಾರದರ್ಶಕ ರತ್ನವಾಗಿದ್ದು, ಶಕ್ತಿಯುತ ಭಾವನೆಗಳನ್ನು ಹೊರಸೂಸುತ್ತದೆ. ಇದು ಬೆಳಕಿನ ವರ್ಣಪಟಲದಿಂದ ಕೆಂಪು ವಿಕಿರಣವನ್ನು ಹೀರಿಕೊಳ್ಳುತ್ತದೆ ಮತ್ತು ವೈಧವ್ಯದಿಂದ ಮಹಿಳೆಯನ್ನು ರಕ್ಷಿಸುತ್ತದೆ.

6. ಕೆಂಪು ಹವಳದಿಂದ ಮಗುವಿನ ಬೆಳವಣಿಗೆಯನ್ನು ಸುಧಾರಿಸಬಹುದು. 

7. ಹವಳವು ಉದ್ಧಟತನ ಮತ್ತು ಕೋಪವನ್ನು ಕಡಿಮೆ ಮಾಡುತ್ತದೆ. ವ್ಯಕ್ತಿಯ ಶಕ್ತಿ, ಧೈರ್ಯ, ಆತ್ಮ ವಿಶ್ವಾಸ(Confidence), ಆಸೆಗಳನ್ನು(Desires) ಸೂಚಿಸುತ್ತದೆ.

ಸ್ಥಳೀಯರು ಕ್ರಿಯಾಶೀಲರಾಗಿರುವ ಸಾಧ್ಯತೆ ಇದೆ. ಶಕ್ತಿಯುತ ಕೆಂಪು ಹವಳವನ್ನು ಧರಿಸಿದ ನಂತರ ದೃಢವಾದ ನಿರ್ಣಯವನ್ನು ಹೊಂದಿರುತ್ತಾರೆ. ಹಾಗೆಯೇ, ಹವಳವು ನಾಯಕತ್ವದ(Leadership) ಗುಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆರ್ಥಿಕ ಮತ್ತು ವೃತ್ತಿಪರ ಬೆಳವಣಿಗೆಯನ್ನು ಪಡೆಯಲು ಸಹ ಸಹಕಾರಿಯಾಗಿದೆ. 

ಹವಳದ ಕಲ್ಲಿನ ಗುಣಪಡಿಸುವ ಪ್ರಯೋಜನಗಳು 

1. ರತ್ನದ ಬಣ್ಣವು ಕೆಂಪು ಬಣ್ಣದಿಂದ ಹಳದಿಗೆ ಹರಡುತ್ತದೆ ಎಂಬ ನಂಬಿಕೆ ಇದೆ. ಸಿಡುಬು, ತಲೆನೋವು(Headache), ಹುರುಪು ನಷ್ಟ, ದಡಾರ(Dadara), ಪೈಲ್ಸ್(Piles), ಹುಣ್ಣುಗಳಿಗೆ(Ulcer) ಕೆಂಪು ಹವಳ ಧರಿಸಲು ಶಿಫಾರಸು ಮಾಡಲಾಗುತ್ತದೆ.

2. ಮಹಿಳೆಯು ಗರ್ಭಾವಸ್ಥೆಯ(Pregnancy) 3 ತಿಂಗಳ ನಂತರ ಕೆಂಪು ಹವಳವನ್ನು ಧರಿಸುವುದರಿಂದ ಗರ್ಭಪಾತದ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

3. ಧರಿಸುವ ವ್ಯಕ್ತಿಯ ಶತ್ರುಗಳು ಮತ್ತು ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ. ಅಲ್ಲದೆ, ಇದು ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಪಘಾತ(Accident), ಕಡಿತ(Bite), ಕಾರ್ಯಾಚರಣೆ ಮತ್ತು ಶಸ್ತçಚಿಕಿತ್ಸೆಯಿಂದ(Surgery) ಧರಿಸಿದವರನ್ನು ರಕ್ಷಿಸುತ್ತದೆ.

4. ಹವಳದ ರತ್ನದ ಶಕ್ತಿಯು ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರ ದೇಹವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ.

ಈ ರತ್ನ ಧಾರಣೆ ಮಾತ್ರದಿಂದ ನಿಮ್ಮೊಳಗಿನ ಪ್ರತಿಭೆ ಹೊರ ಬರುತ್ತದೆ!

ಹವಳ ಧರಿಸುವ ಸರಿಯಾದ ವಿಧಾನ(Right Way)

1. ಕೆಂಪು ಹವಳದ ತೂಕ ಆರು ಕ್ಯಾರೆಟ್(Caret) ಮತ್ತು ಹನ್ನೆರಡು ಕ್ಯಾರೆಟ್ ನಡುವೆ ಇರಬೇಕು. ಅದಾಗ್ಯೂ, ಮಂಗಳವಾರದAದು(Tuesday) ಸೂರ್ಯೋದಯದ(Sunrise) ಮೊದಲ ಗಂಟೆಯಲ್ಲಿ    ಧರಿಸುವುದು ಒಳ್ಳೆಯದು. 

2. ಮೃಗಶಿರ, ಚಿತ್ರ, ಅನುರಾಧ ಮತ್ತು ಧನಿಷ್ಠಾ ನಕ್ಷತ್ರಗಳಲ್ಲಿ ಮಂಗಳವಾರದAದು ಹವಳ ಧರಿಸುವುದು ಬಹಳ ಶ್ರೇಷ್ಠ ಎಂದು ಶಾಸ್ತçದಲ್ಲಿ ಹೇಳಲಾಗಿದೆ. 

3. ತಾಮ್ರ ಅಥವಾ ಚಿನ್ನದಿಂದ(Gold) ಮಾಡಿದ ಉಂಗುರವನ್ನು(Finger Ring) ಯಾವುದೇ ಕೈಯ ಉಂಗುರದ ಬೆರಳಿಗೆ ಧರಿಸಬೇಕು. ಇದರ ಹೊರತಾಗಿ ಕೆಂಪು ಹವಳವನ್ನು ಪೆಂಡೆAಟ್(Pendant) ಅಥವಾ ಕಂಕಣವನ್ನು ಧರಿಸಬಹುದು. ಆದರೆ ಪ್ರಯೋಜನ ಪಡೆಯಲು ಹವಳವು ದೇಹವನ್ನು ಸ್ಪರ್ಶಿಸಬೇಕು.

4. ಗಂಗಾಜಲ ಅಥವಾ ಕುದಿಸದ ಹಾಲಿನಲ್ಲಿ(Milk) ಅದ್ದಿ ಮತ್ತು ನಿಗದಿತ ಮಂತ್ರವನ್ನು ಗುರು ಮುಖೇನ ಪಠಿಸುವ ಮೂಲಕ ಕಲ್ಲಿಗೆ ಶಕ್ತಿ ತುಂಬಿದ ನಂತರ ಕೆಂಪು ಹವಳದ ಉಂಗುರ, ಪೆಂಡೆAಟ್ ಅಥವಾ ಕಂಕಣವನ್ನು ಧರಿಸಬಹುದು. 

5. ಕೆಂಪು ಹವಳವು ಒಂಬತ್ತು ದಿನಗಳಲ್ಲಿ ಫಲಿತಾಂಶಗಳನ್ನು ತೋರಿಸುತ್ತದೆ ಮತ್ತು ಮೂರು ವರ್ಷಗಳ ಕಾಲ ಉಳಿಯುವುದಲ್ಲದೆ ನಂತರ ಅದು ನಿಷ್ಕ್ರಿಯವಾಗುತ್ತದೆ. ನಿಷ್ಕ್ರಿಯಗೊಳಿಸಿದ ನಂತರ ಹವಳವನ್ನು ಬದಲಾಯಿಸಬೇಕು. 

6. ತಜ್ಞ ಶಾಸ್ತ್ರಜ್ಞರ ಶಿಫಾರಸ್ಸು ಇಲ್ಲದೆ ಯಾವುದೇ ಇತರೆ ರತ್ನಗಳೊಂದಿಗೆ ಅಥವಾ ಕಲ್ಲುಗಳೊಂದಿಗೆ ಹವಳವನ್ನು ಧರಿಸಬಾರದು.

click me!