ಕೊಟ್ಟ ಸಾಲ ಮರಳಲು, ಸಾಲ ತೀರಿಸಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ

By Suvarna NewsFirst Published Oct 2, 2022, 4:16 PM IST
Highlights

ಕೆಲವರು ಕೈ ತುಂಬಾ ದುಡಿಯುತ್ತಾರೆ. ಆದರೆ, ಸೇವಿಂಗ್ಸ್ ಮಾತ್ರ ನಯಾ ಪೈಸಾ ಇರೋಲ್ಲ. ಭರ್ತಿ ಸಂಬಳ ಎಣಿಸಿದರೂ ಉಳಿತಾಯ ಮಾತ್ರ ಝೀರೋ. ಯಾಕೋ ಕೈಯಲ್ಲಿ ದುಡ್ಡೇ ಉಳಿಯೋಲ್ಲ ಅಂತ ಯೋಚಿಸೋರು ಇಲ್ ಓದಿ. 
 

ವಾಸ್ತು ಶಾಸ್ತ್ರದಲ್ಲಿ ಸಮಸ್ಯೇ ಏನೇ ಇರಲಿ. ಪರಿಹಾರವಿರುತ್ತದೆ. ಅಷ್ಟೇ ಅಲ್ಲದೆ ಹೆಚ್ಚು ಹಣವನ್ನು ಗಳಿಸಲು ಸುಲಭ ಮಾರ್ಗ ಸೂಚಿಸುತ್ತದೆ. ಮನೆಯಲ್ಲಿ ಕೆಲ ಗಿಡ ನೆಡುವುದರಿಂದ  ಮನೆಗೆ ಶುಭವಾಗುವಂತೆ ಮಾಡುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಅಷ್ಟಕ್ಕೂ ಯಾವ ಗಿಡಗಳು ಅವು? ಎಲ್ಲಿ ನೆಡಬೇಕು?

ಪುರಾಣ ಕಾಲದಿಂದಲೂ ಕೆಲವು ಗಿಡ ಮರಗಳನ್ನು (Tree) ಬೆಳೆಸುವ ಪದ್ಧತಿ ಇದೆ. ಈ ಗಿಡಗಳು ಸಕಾರಾತ್ಮಕ ಶಕ್ತಿ (Positive energy) ಹರಿವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ನೆಮ್ಮದಿಯ ವಾತಾವರಣವನ್ನೂ ಸೃಷ್ಟಿಸುತ್ತದೆ. ಜ್ಯೋತಿಷ್ಯ (Astrology) ಮತ್ತು ವಾಸ್ತು ಶಾಸ್ತ್ರದಲ್ಲಿ (Vastu shastra) ಕೆಲವು ಗಿಡ ಮರಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಸುಖ, ನೆಮ್ಮದಿ ಮತ್ತು ಸಂಪತ್ತು ತರಲು ಇವು ಸಹಾಕಾರಿ ಎನ್ನುತ್ತದೆ ವಾಸ್ತು ಶಾಸ್ತ್ರ. 

ಮನೆಯ ಒಳಗೆ ಅಥವಾ ಹೊರಗೆ ಮನಿಪ್ಲಾಂಟ್ (Money plant) ನೆಡುವುದರಿಂದ ಆರ್ಥಿಕ (Economic) ಸಮೃದ್ಧಿ ಹೆಚ್ಚುತ್ತದೆ. ಜೊತೆಗೆ ಕೆಲ ವಿಶೇಷ ಸಸ್ಯಗಳಿದ್ದು, ಅವುಗಳನ್ನು ಮನೆಯ ಮುಖ್ಯದ್ವಾರದಲ್ಲಿ ನೆಡಬೇಕು. ದುಡ್ಡು ಉಳಿಯುವಂತೆ ಮಾಡುತ್ತದೆ ಇದು. ಅಲ್ಲದೇ ಇತರೆ ಸಸ್ಯಗಳೂ ಆರ್ಥಿಕ ಸಮೃದ್ಧಿ ತರುತ್ತದೆ. ಯಾವವು?  

ಈ ವಸ್ತು ಮನೆಯಲ್ಲಿದ್ದರೆ, ಕ್ಷುದ್ರ ಶಕ್ತಿ ಆಗಲೇ ಅಡಗಿತೆ ಎಂದೇ ಅರ್ಥ!

ಕೆಲವು ಗಿಡಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಟ್ಟರೆ ಲಕ್ಷ್ಮೀ (Lakshmi) ನೆಲೆಸಿರುತ್ತಾಳೆ. 
1. ಶಮೀ ವೃಕ್ಷ : ಪುರಾಣ ಕಾಲದಿಂದಲೂ ಅತ್ಯಂತ ಪವಿತ್ರ ವೃಕ್ಷವೆಂದೇ ಕರೆಯಲ್ಪಡುವ ಶಮೀ ವೃಕ್ಷವನ್ನು ಮನೆಯ ಮುಖ್ಯ ದ್ವಾರದ (Entrance) ಎಡ ಬದಿಗೆ ನೆಡುವುದು ಅತ್ಯಂತ ಶುಭ. ಈ ಸ್ಥಳದಲ್ಲಿ ಶಮೀ ಗಿಡವನ್ನು ನೆಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಸದಾ ಮನೆಯೊಡೆಯನ ಮೇಲಿರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಹಣಕಾಸಿಗೆ ಯಾವತ್ತೂ ತೊಂದರೆಯಾಗುವುದೇ ಇಲ್ಲ. 

2. ದಾಳಿಂಬೆ ಗಿಡ :  ಮನೆಯ ಮುಖ್ಯದ್ವಾರದ ಬಲ ಬದಿಗೆ ದಾಳಿಂಬೆ (Promogranate)  ಗಿಡವಿದ್ದರೆ ವ್ಯಕ್ತಿಯ ಭಾಗ್ಯ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ದಾಳಿಂಬೆ ಗಿಡ ನೆಡುವುದರಿಂದ ಲಕ್ಷ್ಮೀ ದೇವಿ ಮತ್ತು ಕುಬೇರ ದೇವರನ್ನು ಆಕರ್ಷಿಸಿದಂತಾಗುತ್ತದೆ. ಸಕಾರಾತ್ಮಕ ಶಕ್ತಿಯ (Positive Energy) ಹರಿವನ್ನು ಹೆಚ್ಚುವಂತೆ ಮಾಡುತ್ತದೆ ಈ ಗಿಡ. ಮನೆಯ ಮುಖ್ಯದ್ವಾರದ ಬಳಿ ನೆಡುವುದರಿಂದ ನೆಗೆಟಿವ್ ಎನರ್ಜಿ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ. 

3. ಬಿಲ್ವ ಪತ್ರೆ : ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವ (Bilva) ಪತ್ರೆಯ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡಬೇಕು. ಇದರಿಂದ ಅನಾವಶ್ಯಕ ಖರ್ಚಿಗೆ (Expenditure) ಕಡಿವಾಣ ಬೀಳುವುದಲ್ಲದೇ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಕೂಡಾ ಹೆಚ್ಚುತ್ತದೆ. ಮನೆಯ ಹಿಂದೆ ಬಾಳೆ, ಮನೆಯ ಮುಂದೆ ಬಿಲ್ವ ಆಮೇಲೆ ನೋಡಿ ಲಕ್ಷ್ಮೀ ದೇವಿಯ ಕೃಪಾಶೀರ್ವಾದ ಸಿಗುವ ರೀತಿ. ಹಾಗಾಗಿ ಮನೆಯ ಹಿಂದೆ ಬಾಳೆ ಗಿಡ ಮತ್ತು ಮನೆಯ ಮುಂದೆ  ಬಿಲ್ವ ಪತ್ರೆ ಗಿಡವನ್ನು ನೆಡುವುದರಿಂದ ಶುಭವೆಂದು ಹೇಳಲಾಗುತ್ತದೆ. 

ಫೆಂಗ್ ಶುಯಿಯ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ಹೆಚ್ಚುತ್ತೆ !

ಇಂಥ ಸಿಂಪಲ್ ವಾಸ್ತು ಟಿಪ್ಸ್ ಫಾಲೋ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹರಿಯುವ ಜೊತೆಗೆ, ಸೇವಿಂಗ್ಸ್ ಮಾಡುವಂತೆ ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಬೇಳಲಿದೆ. ಕೊಟ್ಟ ಸಾಲ ಮರಳುತ್ತದೆ. ನಿಮ್ಮ ಸಾಲಗಳೂ ತೀರುವಂತೆ ಆಗುತ್ತದೆ. ಅಲ್ಲದೇ ಮನೆಯಲ್ಲಿ ವಾಸವಿದ್ದವರಿಗೆ ಒಳ್ಳೇಯ ಗಾಳಿ ಸಿಗುವುದರಿಂದ ಆರೋಗ್ಯವೂ ಸುಧಾರಿಸುವಲ್ಲಿ ಅನುಮಾನವೇ ಇಲ್ಲ. 

click me!