ಮನೆಯಲ್ಲಿ ಹಲ್ಲಿಗಳ ಓಡಾಟ ಎಲ್ಲರಿಗೂ ರೇಜಿಗೆ ತರುವಂಥದ್ದು. ಆದರೆ, ವಾಸ್ತು ಪ್ರಕಾರ ನೋಡಿದಾಗ ಮನೆಯಲ್ಲಿ ಹಲ್ಲಿಗಳಿದ್ದರೆ ಅದಕ್ಕಾಗಿ ನೀವು ಹೆದರಿ ಕಿರುಚುವುದು ಬಿಟ್ಟು, ಸಂತೋಷದಿಂದ ಕುಣಿದಾಡಬೇಕು.
ಹಲ್ಲಿ ಎಂದರೆ ಪ್ರೀತಿ ಇರುವವರು ಬಹುಷಃ ಸಿಗಲಿಕ್ಕಿಲ್ಲ, ಹೆಚ್ಚಿನವರು ಅವುಗಳನ್ನು ಅನಿವಾರ್ಯವಾಗಿಯೇ ಸಹಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಮನೆಯಿಂದ ಹಲ್ಲಿಗಳನ್ನು ಹೊರ ಹಾಕಲು ಶತಾಯಗತಾಯ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಪ್ರತಿದಿನ ಹಲ್ಲಿಯನ್ನು ನೋಡಿ ಕಿರುಚುತ್ತಾ, ಓಡುತ್ತಾ ಮನೆ ಅವರದೋ, ಹಲ್ಲಿಯದೋ ಎಂಬ ಅನುಮಾನ ಹುಟ್ಟಿಸುತ್ತಿರುತ್ತಾರೆ! ನೀವೂ ನಿಮ್ಮ ಮನೆಯಲ್ಲಿ ಹಲ್ಲಿಯನ್ನು ನೋಡಿ ಅಸಹ್ಯದ ಮುಖ ಮಾಡುತ್ತಿದ್ದರೆ ಅಥವಾ ಭಯದಿಂದ ಕಿರುಚಿಕೊಂಡು ಓಡುತ್ತಿದ್ದರೆ, ಈಗಲೇ ಈ ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸಿ. ಏಕೆಂದರೆ, ವಾಸ್ತುವಿನಲ್ಲಿ ಹಲ್ಲಿಗಳು ಶುಭ ಶಕುನವಾಗಿವೆ.
ಹೌದು, ವಾಸ್ತವವಾಗಿ, ಹಲ್ಲಿಯನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವಿಷಯ ತಿಳಿದವರು ವಾಸ್ತು ಪೂಜೆಯ ವೇಳೆ ಹಲ್ಲಿಗಳನ್ನೂ ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಏಕೆಂದರೆ ಯಾವ ಮನೆಯಲ್ಲಿ ಹಲ್ಲಿ ಕಾಣಿಸುತ್ತದೋ ಆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಯಾವಾಗಲೂ ಹಣ ಮತ್ತು ಧಾನ್ಯಗಳು ತುಂಬಿರುತ್ತವೆ. ಮನೆಯಲ್ಲಿ ಹಲ್ಲಿ ಕಂಡರೆ ಈ ಲಕ್ಷಣಗಳನ್ನು ತಿಳಿಯಿರಿ.
undefined
ಮನೆಯಲ್ಲಿ ಹಲ್ಲಿ ಇದ್ದರೆ ಶುಭವೆಂದು ಪರಿಗಣಿಸಲಾಗಿದೆ. ಅಂತಹ ಮನೆಯಲ್ಲಿ ಸುಖ-ಸಮೃದ್ಧಿ ಉಳಿಯುತ್ತದೆ.
ಒಂದು ವೇಳೆ ಮನೆಯಿಂದ ಹಲ್ಲಿಯನ್ನು ಮನೆಯಿಂದ ಓಡಿಸಲೇಬೇಕಿಂದಿದ್ದರೆ ಹಾಗೆ ಮಾಡಿ. ಆದರೆ ಎಂದಿಗೂ ಕೊಲ್ಲಬೇಡಿ.
ಫೆಂಗ್ ಶೂಯಿ ಪರಿಹಾರ ಅನುಸರಿಸಿ ಮನೆಯ ಎಲ್ಲಾ ದೋಷ ನಿವಾರಿಸಿ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.