ವಾಸ್ತು ಶಾಸ್ತ್ರದಲ್ಲಿ ಬರೀ ಮನೆಯ ದಿಕ್ಕನ್ನು ಮಾತ್ರವಲ್ಲ ಮಲಗುವ ದಿಕ್ಕನ್ನೂ ಹೇಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿ ಯಾವ ದಿಕ್ಕಿನಲ್ಲಿ ಮಲಗಿದ್ರೆ ಯಾವೆಲ್ಲ ಲಾಭ, ಏನೆಲ್ಲ ನಷ್ಟವಿದೆ ಎಂಬುದನ್ನು ಹೇಳಲಾಗಿದೆ.
ದಾಂಪತ್ಯದ ಜೀವನ ಸದಾ ಸುಖಕರವಾಗಿ, ಸಂತೋಷವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಇದಕ್ಕಾಗಿ ಪ್ರತಿಯೊಬ್ಬರು ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ದಾಂಪತ್ಯ ದೀರ್ಘಕಾಲ ಇರಬೇಕೆಂದ್ರೆ ಪತಿ – ಪತ್ನಿ ಇಬ್ಬರ ಸಹಕಾರ ಮುಖ್ಯ. ಆದ್ರೆ ವಿವಾಹಿತೆ ಮಾಡುವ ಕೆಲ ತಪ್ಪುಗಳು ದಾಂಪತ್ಯ ಸುಖವನ್ನು ಹಾಳು ಮಾಡುತ್ತದೆ. ಇಬ್ಬರ ಮಧ್ಯೆ ವಿವಾದ ಏಳಲು ಕಾರಣವಾಗುತ್ತದೆ. ಗೃಹಿಣಿ ಹೇಗೆ ಮಲಗ್ತಾಳೆ ಎಂಬುದು ಆಕೆ ದಾಂಪತ್ಯ ಸುಖದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆ ತಪ್ಪು ದಿಕ್ಕಿನಲ್ಲಿ ಮಲಗಿದ್ರೆ ಆಕೆ ದಾಂಪತ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಪತಿ ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ತಾನು ಹೇಗೆ ಮಲಗಬೇಕು ಎಂಬುದನ್ನು ತಿಳಿದಿರಬೇಕು.
ದಂಪತಿ ಬೆಡ್ ರೂಮಿ (Bedroom) ಗೆ ಹೆಚ್ಚು ಮಹತ್ವ ನೀಡ್ತಾರೆ. ಅಲ್ಲಿನ ಬೆಡ್, ಅದಕ್ಕೆ ಹಾಕುವ ಬೆಡ್ ಶೀಟ್, ಅಲಂಕಾರಿಕ ವಸ್ತು, ಲೈಟ್ ಬಗ್ಗೆ ಗಮನ ನೀಡ್ತಾರೆ. ಆದ್ರೆ ಈ ಬಗ್ಗೆ ವಾಸ್ತು ಏನು ಹೇಳುತ್ತೆ, ಎಲ್ಲಿ, ಯಾವ ದಿಕ್ಕಿ (Direction) ನಲ್ಲಿ ಮಲಗಿದ್ರೆ ಒಳ್ಳೆಯದು ಎನ್ನುವ ಬಗ್ಗೆ ಯಾರೂ ಗಮನ ಹರಿಸಲು ಹೋಗೋದಿಲ್ಲ.
undefined
ಪೂಜೆಯಲ್ಲಿ ಬಾಳೆ ಎಲೆಗೇಕೆ ಪ್ರಾಮುಖ್ಯತೆ ?
ವಿವಾಹಿತ ಮಹಿಳೆ (Married Woman) ಈ ದಿಕ್ಕಿನಲ್ಲಿ ಮಲಗಬಾರದು : ಶಾಸ್ತ್ರಗಳ ಪ್ರಕಾರ, ಮಹಿಳೆ ವಾಯುವ್ಯ ದಿಕ್ಕಿನಲ್ಲಿ ಮಲಗುವುದನ್ನು ತಪ್ಪಿಸಬೇಕು. ವಾಯುವ್ಯ ದಿಕ್ಕಿನ ಆಡಳಿತ ಗ್ರಹ ಚಂದ್ರ. ಈ ದಿಕ್ಕಿನಲ್ಲಿ ಮಲಗುವುದರಿಂದ ಮಹಿಳೆಯರು ಪ್ರತ್ಯೇಕ ಮನೆ ಮಾಡುವ ಕನಸು ಕಾಣಲು ಪ್ರಾರಂಭಿಸುತ್ತಾರೆ. ಇದು ಗಂಡನ ಮೇಲೂ ಪ್ರಭಾವ ಬೀರುತ್ತದೆ. ಸಂಪತ್ತಿನ ಅಧಿಪತಿ ಕುಬೇರ (Kubera) ನೂ ಈ ದಿಕ್ಕಿನಲ್ಲಿ ಮಲಗುವುದರಿಂದ ಕೋಪಗೊಳ್ಳುತ್ತಾನೆ. ಪತಿ, ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಹಿಳೆ ಯಾವ ದಿಕ್ಕಿನಲ್ಲಿ ಮಲಗುವುದು ಒಳ್ಳೆಯದು : ಮಹಿಳೆ ಮಲಗಲು ದಕ್ಷಿಣ ದಿಕ್ಕು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಲಗುವಾಗ ತಲೆ ದಕ್ಷಿಣ ದಿಕ್ಕಿಗೆ ಇರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನೀವು ದಕ್ಷಿಣ ದಿಕ್ಕಿಗೆ ಕಾಲನ್ನು ಹಾಕಿ ಮಲಗಬೇಡಿ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎನ್ನಲಾಗುತ್ತದೆ. ನೀವು ಕಾಲು ಹಾಕಿ ಮಲಗಿದ್ರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನೀವು ಎದುರಿಸಬೇಕಾಗುತ್ತದೆ.
ಅರಿಶಿನವನ್ನು ಹೀಗೆ ಬಳಸಿದ್ರೆ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆ ದೂರಾಗುತ್ತೆ!
ಹಾಸಿಗೆಯ ಯಾವ ಬದಿಯಲ್ಲಿ ಮಲಗಬೇಕು? : ಮಹಿಳೆ ಹಾಸಿಗೆಯ ಯಾವ ಭಾಗದಲ್ಲಿ ಮಲಗಬೇಕು ಎಂಬುದು ಕೂಡ ಮಹತ್ವ ಪಡೆಯುತ್ತದೆ. ಮಹಿಳೆ ಹಾಸಿಗೆಯ ಬಲಭಾಗದಲ್ಲಿ ಮಲಗಬೇಕು. ಪತಿ, ಹಾಸಿಗೆಯ ಎಡಭಾಗದಲ್ಲಿ ಮಲಗಬೇಕು. ಹೀಗೆ ಮಾಡಿದ್ರೆ ಇಬ್ಬರ ಮೇಲೆ ಪ್ರೀತಿ ಹೆಚ್ಚಾಗುತ್ತದೆ.
ಬೆಡ್ ರೂಮಿನ ಈ ವಾಸ್ತು ಟಿಪ್ಸ್ ಪಾಲನೆ ಮಾಡಿ :
• ಹಾಸಿಗೆ ಮೇಲೆ ಯಾವುದೇ ಲೈಟ್ ಇಲ್ಲದಂತೆ ನೋಡಿಕೊಳ್ಳಿ.
• ವಾಸ್ತು ಸಲಹೆಯ ಪ್ರಕಾರ, ಮಲಗುವ ಕೋಣೆ ಒತ್ತಡದಿಂದ ಮುಕ್ತವಾಗಿರಬೇಕು. ಲ್ಯಾಪ್‌ಟಾಪ್, ಮೊಬೈಲ್ ಫೋನ್, ಚಾರ್ಜರ್ ಮುಂತಾದ ಎಲೆಕ್ಟ್ರಾನಿಕ್ ಗ್ಯಾಜೆಟ್ ಬೆಡ್ ರೂಮಿನಲ್ಲಿ ಇರದಂತೆ ನೋಡಿಕೊಳ್ಳಿ.
• ಹೊಸದಾಗಿ ಮದುವೆಯಾದ ಜೋಡಿ, ಹಿರಿಯರ ಜೊತೆ ವಾಸವಾಗಿದ್ದರೆ ದಂಪತಿ ಕೋಣೆ ವಾಯುವ್ಯದಲ್ಲಿರುವಂತೆ ನೋಡಿಕೊಳ್ಳಿ. ಈಶಾನ್ಯ ದಿಕ್ಕಿನಲ್ಲಿ ಮಲಗುವ ಕೋಣೆ ಇರದಂತೆ ನೋಡಿಕೊಳ್ಳಿ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಗುವನ್ನು ಪಡೆಯಲು ಬಯಸುವ ದಂಪತಿ ಆಗ್ನೇಯ ದಿಕ್ಕಿನ ಕೋಣೆಯಲ್ಲಿ ಮಲಗಬಹುದು.
• ಬಾಗಿಲಿನ ಮುಂದೆ ಹಾಸಿಗೆ ಇರದಂತೆ ನೋಡಿಕೊಳ್ಳಿ. ದಂಪತಿ ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬಾರದು. ಇದ್ರಿಂದ ಒತ್ತಡ ಹೆಚ್ಚಾಗುತ್ತದೆ. ಆಯಾಸ ಜನರನ್ನು ಕಾಡುತ್ತದೆ.
• ಅವಿವಾಹಿತ ಹುಡುಗಿಯರು ನೈಋತ್ಯ ದಿಕ್ಕಿಗೆ ಪಾದಗಳನ್ನಿಟ್ಟು ಮಲಗಬಾರದು. ಮದುವೆಯಾಗಬಯಸುವ ಹುಡುಗಿಯರು ವಾಯುವ್ಯ ದಿಕ್ಕಿಗೆ ತಲೆಯಿಟ್ಟು ಮಲಗಬೇಕು.