
ಒಂದು ಮಗು ಪಡೆಯುವುದು ಅನೇಕ ದಂಪತಿಗಳ ಸುದೀರ್ಘ ಕಾಲದ ಕನಸು. ಆದರೆ ಯಾವ್ಯಾವುದೋ ಕಾರಣಗಳಿಂದ ಗರ್ಭ ನಿಲ್ಲುತ್ತಿರುವುದಿಲ್ಲ. ಇದಾಗಬೇಕಾದರೆ ಇಬ್ಬರೂ ಹೆಲ್ದಿಯಾಗಿರಬೇಕು, ಇಬ್ಬರಲ್ಲೂ ವೀರ್ಯಾಣು- ಅಂಡಾಣು ಸರಿಯಾಗಿರಬೇಕು ಎಂಬುದೇನೋ ನಿಜ. ಅದರ ಜೊತೆಗೆ ಇನ್ನೊಂದಿದೆ- ಕೆಲವೊಮ್ಮೆ ಮನೆಯಲ್ಲಿ ವಾಸ್ತುದೋಷಗಳು ಕಂಡುಬರುವುದರಿಂದಲೂ ಗರ್ಭ ನಿಲ್ಲದಿರುವ ಚಾನ್ಸ್ ಇದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ವಾಸ್ತುವು ನೀರು, ವಾಯು, ಅಗ್ನಿ, ಭೂಮಿ ಮತ್ತು ಆಕಾಶದಂತಹ ಪಂಚಭೂತಗಳನ್ನು ಆಧರಿಸಿದೆ. ಮಗುವನ್ನು ಪಡೆಯಲು ಎಲ್ಲಾ ಧಾತುಗಳೂ ಮನೆಯಲ್ಲಿ ಸಮತೋಲನದಲ್ಲಿರಬೇಕು. ಲೈಂಗಿಕ ಸಂಬಂಧಗಳಿಗೆ ಕಾರಣವಾದ ಧಾತು ಅಗ್ನಿಯಾಗಿದ್ದು ಇದು ಆಗ್ನೇಯ ದಿಕ್ಕಿನಲ್ಲಿ ಕಂಡುಬರುತ್ತದೆ. ಇದೇ ಅಗ್ನಿಧಾತು ಮಹಿಳೆಯ ಗರ್ಭಧಾರಣೆ ಮತ್ತು ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಕಾರಣವಾಗಿದೆ.
ಯಾವ ದಿಕ್ಕಿನಲ್ಲಿ ಶಯನದ ಕೋಣೆ?
ಸರಿಯಾದ ಸಂಬಂಧ ಹೊಂದಿರಲು ಮತ್ತು ಉತ್ತಮ ಲೈಂಗಿಕ ಸಂಬಂಧಕ್ಕಾಗಿ ದಂಪತಿಗಳು ಆಗ್ನೇಯ ದಿಕ್ಕಿನಲ್ಲಿ ಮಲಗಬೇಕು. ವಾಯುವ್ಯ ದಿಕ್ಕಿನಲ್ಲಿ ಮಲಗುವ ದಂಪತಿಗಳು ಪರ್ಜನ್ಯ ಎನ್ನುವ ನಿರ್ದಿಷ್ಟ ಶಕ್ತಿ ಕ್ಷೇತ್ರದಲ್ಲಿದ್ದು, ಇದು ನಿಜಕ್ಕೂ ಗರ್ಭಧಾರಣೆಗೆ ನೆರವಾಗುತ್ತದೆ. ಈ ಶಕ್ತಿ ಶರೀರ ಮತ್ತು ಮನಸ್ಸನ್ನು ತಂಪಾಗಿ, ಸ್ಥಿರವಾಗಿರಿಸುತ್ತದೆ. ಮಹಿಳೆ ಒಮ್ಮೆ ಗರ್ಭ ಧರಿಸಿದ ನಂತರ ಮಗುವಿನ ಸ್ಥಿರತೆಗಾಗಿ ಆಕೆ ಈಶಾನ್ಯ ಮೂಲೆಯಿಂದ ನೈಋತ್ಯ ದಿಕ್ಕಿಗೆ ಮಲಗಬೇಕು.
ಮಲಗುವ ಕೋಣೆ ದಕ್ಷಿಣ ಮತ್ತು ನೈಋತ್ಯ ದಿಕ್ಕುಗಳ ನಡುವೆ ಇದ್ದರೆ, ಈ ವಲಯ ವಿಲೇವಾರಿ ವಲಯವಾಗಿದ್ದು, ಗರ್ಭಧರಿಸಲು ಕಷ್ಟವಾಗುತ್ತದೆ. ಹಾಗೆಯೇ, ಮಲಗುವ ಕೊಠಡಿ ಪೂರ್ವ ಮತ್ತು ಆಗ್ನೇಯ ದಿಕ್ಕುಗಳ ನಡುವೆ ಇದ್ದರೆ ಅಥವಾ ಪಶ್ಚಿಮ ಮತ್ತು ವಾಯುವ್ಯ ದಿಕ್ಕುಗಳ ನಡುವೆ ಇದ್ದರೆ ಗರ್ಭಧರಿಸಲು ಅಡಚಣೆಗಳು ಉಂಟಾಗಬಹುದು.
ನೈಋತ್ಯ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಅಥವಾ ಈ ದಿಕ್ಕು ದುರ್ಬಲವಾಗಿದ್ದರೆ, ಮಗುವನ್ನು ಪಡೆಯುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ. ಮನೆಯಲ್ಲಿ ಅಗ್ನಿಧಾತು ದುರ್ಬಲವಾಗಿದ್ದರೆ, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯವೂ ದುರ್ಬಲವಾಗಿರುತ್ತದೆ. ಜೊತೆಗೆ ದಕ್ಷಿಣ ಅಥವಾ ಆಗ್ನೇಯ ದಿಕ್ಕಿನ ನಡುವೆ ಶೌಚಾಲಯವಿದ್ದರೆ ಅಥವಾ ಈಶಾನ್ಯ ದಿಕ್ಕಿನಲ್ಲಿ ಅಡಿಗೆ ಮನೆಯಿದ್ದರೆ, ಅದು ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಮನೆಯ ಮಧ್ಯಭಾಗದಲ್ಲಿ ಮೆಟ್ಟಿಲು ಅಥವಾ ಯಾವುದೇ ಭಾರವಾದ ವಸ್ತುಗಳಿರಬಾರದು, ಇದು ಗರ್ಭಧಾರಣೆಯಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಗರ್ಭಿಣಿ ಮಹಿಳೆಯನ್ನು ಎಂದಿಗೂ ಕತ್ತಲೆ ಕೊಠಡೀ ಅಥವಾ ಗಾಢವಾದ ಸ್ಥಳದಲ್ಲಿ ಬಿಡಬಾರದು, ಆಕೆಯ ಸುತ್ತ ಯಾವಾಗಲೂ ಸ್ವಲ್ಪವಾದರೂ ಬೆಳಕಿರುವಂತೆ ನೋಡಿಕೊಳ್ಳಬೇಕು. ಗರ್ಭಿಣಿ ಮಹಿಳೆ ಮಲಗುವಾಗ ಆಕೆಯ ತಲೆ ದಕ್ಷಿಣ ದಿಕ್ಕಿಗಿದ್ದು, ಕಾಲುಗಳು ಉತ್ತರ ದಿಕ್ಕಿಗಿರಬೇಕು.
ಏನು ಮಾಡಬೇಕು?
ಸನ್ನಿವೇಶ ಅನುಕೂಲಕರವಾಗಿದ್ದರೆ, ಮನೆಯ ಹಿಂಭಾಗ ಆಗ್ನೇಯ ದಿಕ್ಕಿನಲ್ಲಿ ಹಣ್ಣಿನ ಸಸಿಗಳನ್ನು ನೆಡುವಂತೆ ಅಥವಾ ತೋಟ ಮಾಡುವಂತೆ ಸಲಹೆ ನೀಡಲಾಗುತ್ತದೆ. ಪಿಂಕ್ ಬಣ್ಣದ ಗುಲಾಬಿ ಕ್ರಿಸ್ಟಲ್ ಗಳನ್ನು ಮಲಗುವ ಕೊಠಡಿಯಲ್ಲಿಡಬೇಕು. ಮಲಗುವ ಕೊಠಡಿಯಲ್ಲಿ ಕನ್ನಡಿಯಿದ್ದರೆ ಅದನ್ನು ಮುಚ್ಚಬೇಕು ಅಥವಾ ಸಂಪೂರ್ಣ ತೆಗೆಯಬೇಕು. ಯಾವಾಗಲೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಮೂಡಿಸಲು ತಾಜಾ ಹೂವುಗಳನ್ನಿಡಬೇಕು. ಹಾಸಿಗೆಯ ಬಳಿ ಅಥವಾ ವಾಯುವ್ಯ ದಿಕ್ಕಿನಲ್ಲಿ ಬಾಲಕೃಷ್ಣನ ಸಣ್ಣ ವಿಗ್ರಹ ಅಥವಾ ಫೋಟೋ ಇಡಬಹುದು.
ಸರ್ಕಾರಿ ನೌಕರಿ ಮೇಲೆ ಕಣ್ಣಿಟ್ಟಿದ್ದೀರಾ? ಇಲ್ಲಿದೆ 5 ವಾಸ್ತು ಟಿಪ್ಸ್
ಏನು ಮಾಡಬಾರದು?
ಗರ್ಭಿಣಿ ಮಹಿಳೆ ಮನಸ್ಸಿಗೆ ಖಿನ್ನತೆ ಉಂಟುಮಾಡುವಂತಹ ನಕಾರಾತ್ಮಕ ಮನೋಭಾವವನ್ನು ಸೂಚಿಸುವಂತಹ ಹಿಂಸೆ, ಕ್ರೂರತೆ ಇತ್ಯಾದಿ ಇರುವ ಪೇಂಟಿಂಗ್ ಗಳನ್ನು ಹಾಕಬಾರದು. ಗರ್ಭಿಣಿ ಮಹಿಳೆ ಗಾಢ ಅಥವಾ ಕಪ್ಪುಬಣ್ಣದ ಬಟ್ಟೆಗಳನ್ನು ಎಂದರೆ ಕಪ್ಪು ಅಥವಾ ಗಾಢ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಗರ್ಭಿಣಿ ಮಹಿಳೆ ಎಂದಿಗೂ ತೊಲೆಯ ಅಡಿಯಲ್ಲಿ ಮಲಗಬಾರದು. ಮನೆಯಲ್ಲಿ ಬೋನ್ಸಾಯ್ ಅಥವಾ ಮುಳ್ಳಿರುವ ಗಿಡಗಳಿರಬಾರದು. ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಕಡಿಮೆ ಮಾಡುವುದು ಉತ್ತಮ.
ಮನೆಯ ಮುಖ್ಯ ದ್ವಾರ ದಕ್ಷಿಣಾಭಿಮುಖವಾಗಿದೆಯೇ, ಇವರಿಗೆ ಪಕ್ಕಾ ಅದೃಷ್ಟ