
ಸಾಮಾನ್ಯವಾಗಿ ಯಾರಾದರೂ ಹೊಸ ಮನೆಗೆ ಪ್ರವೇಶಿಸುವಾಗ ಹಳೆಯ ಮನೆಯ ವಸ್ತುಗಳನ್ನೂ ಹೊಸ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇದು ಒಂದು ರೀತಿಯಲ್ಲಿ ಸರಿಯಾದ ನಿರ್ಧಾರವೇ ಆಗಿದೆ. ಏಕೆಂದರೆ ಮನೆಯಲ್ಲಿರುವ ಎಲ್ಲ ವಸ್ತುಗಳನ್ನೂ ಹೊಸದಾಗಿ ಖರೀದಿಸುವುದು ಸಾಧ್ಯವಾಗುವುದಿಲ್ಲ. ಆದರೆ, ಕೆಲವೊಮ್ಮೆ ಆತುರದಲ್ಲಿ ಹಾಳಾಗಿರುವ ಅಥವಾ ಬಳಕೆಗೆ ಯೋಗ್ಯವಲ್ಲದ ಕೆಲವು ವಸ್ತುಗಳನ್ನೂ ಹೊಸ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಹೀಗೆ ಮಾಡುವುದರಿಂದ ಹೊಸ ಮನೆಯಲ್ಲಿಯೂ ಕೆಲವು ವಾಸ್ತು ದೋಷಗಳಿಗೆ ಆಹ್ವಾನ ನೀಡಿದಂತಾಗಬಹುದು. ಹಾಗಿದ್ರೆ ಹೊಸ ಮನೆಗೆ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ನೋಡೋಣ.
ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಪಾತ್ರೆಗಳು ಮತ್ತು ಬಿರುಕು ಬಿಟ್ಟ ಗಾಜಿನ ವಸ್ತುಗಳನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆ ಮತ್ತು ಅಶಾಂತಿಗೆ ಕಾರಣವಾಗಬಹುದು. ಹೀಗಾಗಿ ನೀವು ಹೊಸ ಮನೆಗೆ ಪ್ರವೇಶಿಸುವಾಗ ಒಡೆದ ಕಪ್, ಪ್ಲೇಟ್, ಕನ್ನಡಿ ಮತ್ತು ಇತರ ಗಾಜಿನ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ.
2. ನಿಂತುಹೋದ ಅಥವಾ ಹಾಳಾದ ಗಡಿಯಾರಗಳು
ಸಾಮಾನ್ಯವಾಗಿ ಯಾವುದೇ ಸ್ಥಳದಲ್ಲಿಯೂ ನಿಂತುಹೋದ ಗಡಿಯಾರಗಳನ್ನು ಇಟ್ಟುಕೊಳ್ಳಬಾರದು. ಅದರಲ್ಲೂ ಹೊಸ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿ ಇಂತಹ ಗಡಿಯಾರಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗಬಾರದು. ಇವು ನಿಮ್ಮ ಸಮಯವನ್ನೂ ಹಾಳುಮಾಡಬಹುದು ಎಂಬ ನಂಬಿಕೆಯಿದೆ. ಇದು ನಿಮ್ಮ ಪ್ರಗತಿಗೂ ಅಡ್ಡಿಯಾಗುತ್ತದೆ.
3. ಹಳೆಯ ಮತ್ತು ಹರಿದ ಬಟ್ಟೆಗಳು
ಹರಿದ ಅಥವಾ ತುಂಬಾ ಹಳೆಯ ಬಟ್ಟೆಗಳನ್ನು ಧರಿಸಬಾರದು. ಇಂತಹ ಬಟ್ಟೆಗಳು ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ. ನೀವು ಹೊಸ ಮನೆಗೆ ಪ್ರವೇಶಿಸುವಾಗ ಹಳೆಯ ಅಥವಾ ಹರಿದ ಬಟ್ಟೆಗಳನ್ನು ಅಲ್ಲಿಗೆ ತೆಗೆದುಕೊಂಡು ಹೋದರೆ, ಅವುಗಳ ಜೊತೆಗೆ ನಕಾರಾತ್ಮಕ ಶಕ್ತಿಯೂ ಹೊಸ ಮನೆಗೆ ಪ್ರವೇಶಿಸಬಹುದು.
4. ಮುರಿದ ಪೀಠೋಪಕರಣಗಳು
ವಾಸ್ತು ನಂಬಿಕೆಗಳ ಪ್ರಕಾರ ಮುರಿದ ಪೀಠೋಪಕರಣಗಳಲ್ಲಿ ಹೆಚ್ಚಿನ ನಕಾರಾತ್ಮಕ ಶಕ್ತಿ ಇರುತ್ತದೆ. ಆದ್ದರಿಂದ ಹೊಸ ಮನೆಗೆ ಪ್ರವೇಶಿಸುವಾಗ ಹಳೆಯ ಅಥವಾ ಮುರಿದ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ವಾಸ್ತು ದೋಷ ಉಂಟಾಗಬಹುದು.
5. ಒಣಗಿದ ಮತ್ತು ಬಾಡಿಹೋದ ಗಿಡಗಳು
ಮನೆಯಲ್ಲಿ ಹಸಿರಿನಿಂದ ಕಂಗೊಳಿಸುವ ಗಿಡಗಳು ತಾಜಾತನ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಇದಕ್ಕೆ ವಿರುದ್ಧವಾಗಿ ಒಣಗಿದ ಮತ್ತು ಬಾಡಿಹೋದ ಗಿಡಗಳನ್ನು ವಾಸ್ತು ದೃಷ್ಟಿಯಿಂದ ಒಳ್ಳೆಯದೆಂದು ಪರಿಗಣಿಸುವುದಿಲ್ಲ. ನೀವು ಹೊಸ ಮನೆಗೆ ಪ್ರವೇಶಿಸುವಾಗ ಅಲ್ಲಿ ಯಾವುದೇ ಕಾರಣಕ್ಕೂ ಒಣಗಿದ ಅಥವಾ ಬಾಡಿಹೋದ ಗಿಡಗಳು ಮತ್ತು ಹೂವುಗಳನ್ನು ತೆಗೆದುಕೊಂಡು ಹೋಗಬೇಡಿ.