ವಾಸ್ತು ಪ್ರಕಾರ ಈ 6 ವಸ್ತುಗಳನ್ನು ಅಪ್ಪಿತಪ್ಪಿಯೂ ದಾಟಬೇಡಿ, ತಪ್ಪಿ ದಾಟಿದ್ರೋ ತಕ್ಷಣ ಹೀಗೆ ಮಾಡಿ

Published : Nov 18, 2026, 09:07 PM IST
Vastu Tips

ಸಾರಾಂಶ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ನಿಂಬೆ-ಮೆಣಸಿನಕಾಯಿ, ಪೊರಕೆ, ಪೂಜಾ ಸಾಮಗ್ರಿಗಳು ಸೇರಿದಂತೆ ಕೆಲವು ವಸ್ತುಗಳನ್ನು ದಾಟಬಾರದು ಎಂಬ ನಂಬಿಕೆಯಿದೆ. ಇಂತಹ 6 ವಸ್ತುಗಳು ಯಾವುವು? ಅಪ್ಪಿತಪ್ಪಿ ದಾಟಿದರೆ ಅನುಸರಿಸಬೇಕಾದ ಸರಳ ಪರಿಹಾರಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾಟಬೇಡಿ.

ವಾಸ್ತು ಮತ್ತು ಶಾಸ್ತ್ರಗಳ ಪ್ರಕಾರ, ಮನೆ ಅಥವಾ ರಸ್ತೆಯಲ್ಲಿ ನೆಲದ ಮೇಲೆ ಬಿದ್ದಿರುವ ಕೆಲವು ವಸ್ತುಗಳನ್ನು ದಾಟಿಕೊಂಡು ಹೋಗಬಾರದು ಎಂಬ ನಂಬಿಕೆಯಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಅಡೆತಡೆಗಳು ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹುದು ಎನ್ನಲಾಗುತ್ತದೆ. ಒಂದು ವೇಳೆ ತಪ್ಪಿ ದಾಟಿದರೆ, ಅದರ ಪರಿಣಾಮ ತಪ್ಪಿಸಲು ಕೆಲವು ಸರಳ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಹಾಗಾದರೆ ಯಾವ 6 ವಸ್ತುಗಳನ್ನು ದಾಟಬಾರದು ಮತ್ತು ತಪ್ಪಿ ದಾಟಿದರೆ ಏನು ಮಾಡಬೇಕು ನೋಡೋಣ.

1. ನಿಂಬೆಹಣ್ಣು ಮತ್ತು ಮೆಣಸಿನಕಾಯಿ

ಮನೆ, ಅಂಗಡಿ ಅಥವಾ ವ್ಯಾಪಾರಕ್ಕೆ ದೃಷ್ಟಿ ತೆಗೆಯಲು ಬಳಸಿದ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕೆಲವರು ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ಇವುಗಳಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಎಂಬ ನಂಬಿಕೆಯಿರುವುದರಿಂದ ಅವುಗಳನ್ನು ದಾಟಬಾರದು.

2. ರಸ್ತೆಯಲ್ಲಿ ಬಿದ್ದಿರುವ ಪೂಜಾ ಸಾಮಗ್ರಿಗಳು

ರಸ್ತೆ ಅಥವಾ ತಿರುವುಗಳಲ್ಲಿ ಅರಿಶಿನ, ಕುಂಕುಮ, ಅಕ್ಷತೆ ಅಥವಾ ಸುಟ್ಟ ಧೂಪದ್ರವ್ಯಗಳು ಕಂಡುಬಂದರೆ ಅವುಗಳನ್ನು ದಾಟಬಾರದು. ಇವು ಯಾವುದಾದರೂ ಪೂಜಾ ವಿಧಿಯ ಭಾಗವಾಗಿರಬಹುದು.

3. ಪೊರಕೆ

ಮನೆಯ ಪೊರಕೆಯನ್ನು ಕಾಲಿನಿಂದ ದಾಟಬಾರದು ಅಥವಾ ಅದರ ಮೇಲೆ ಕಾಲಿಡಬಾರದು. ಶಾಸ್ತ್ರಗಳಲ್ಲಿ ಪೊರಕೆಯನ್ನು ಲಕ್ಷ್ಮಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಅಗೌರವ ತೋರಿಸುವುದು ಶುಭವಲ್ಲ.

4. ಬೆಂಕಿ ಅಥವಾ ಉರಿಯುತ್ತಿರುವ ದೀಪ

ದೇವರ ಕೋಣೆಯ ದೀಪ, ಹೋಮದ ಅಗ್ನಿ ಅಥವಾ ಪವಿತ್ರ ಬೆಂಕಿಯನ್ನು ದಾಟಬಾರದು. ಅಗ್ನಿಯನ್ನು ಶಕ್ತಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಅದನ್ನು ದಾಟುವುದು ಅಗ್ನಿದೇವನಿಗೆ ಅಗೌರವ ತೋರಿಸಿದಂತೆ.

5. ಊಟದ ತಟ್ಟೆ ಅಥವಾ ಆಹಾರ ಧಾನ್ಯಗಳು

ನೆಲದ ಮೇಲಿಟ್ಟಿರುವ ಊಟದ ತಟ್ಟೆ ಅಥವಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಧಾನ್ಯಗಳನ್ನು ದಾಟಬಾರದು. ಇದರಿಂದ ಮನೆಯಲ್ಲಿ ಅನ್ನದ ಕೊರತೆ ಉಂಟಾಗಬಹುದು ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

6. ಮಲಗಿರುವ ವ್ಯಕ್ತಿ

ಮಲಗಿರುವ ವ್ಯಕ್ತಿಯ ಮೇಲೆ ಕಾಲು ಹಾಕಿಕೊಂಡು ಅಥವಾ ಅವರ ಮೇಲಿನಿಂದ ದಾಟಿ ಹೋಗಬಾರದು. ಇದರಿಂದ ಅವರ ನಿದ್ರೆಗೆ ತೊಂದರೆಯಾಗುವುದಲ್ಲದೆ, ಸಂಬಂಧಗಳಲ್ಲಿ ಅಂತರ ಮತ್ತು ಅನಗತ್ಯ ಜಗಳಗಳು ಉಂಟಾಗಬಹುದು.

ಅಪ್ಪಿ ತಪ್ಪಿ ದಾಟಿದರೆ ತಕ್ಷಣ ಹೀಗೆ ಮಾಡಿ

  • ಮನೆಗೆ ಬಂದ ತಕ್ಷಣ ಕೈ-ಕಾಲುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಬಳಿಕ ಗಂಗಾಜಲವನ್ನು ಮೈಮೇಲೆ ಪ್ರೋಕ್ಷಣೆ ಮಾಡಿಕೊಳ್ಳಿ.
  • ತಪ್ಪಿ ಪೊರಕೆ ಅಥವಾ ಊಟದ ತಟ್ಟೆಯನ್ನು ದಾಟಿದ್ದರೆ, ಅವುಗಳನ್ನು ಸ್ಪರ್ಶಿಸಿ ಹಣೆಗೆ ಮುಟ್ಟಿಸಿಕೊಂಡು ಮನಸ್ಸಿನಲ್ಲೇ ಕ್ಷಮೆ ಕೇಳಿಕೊಳ್ಳಿ.
  • ರಸ್ತೆಯಲ್ಲಿ ಯಾವುದಾದರೂ ವಸ್ತುವನ್ನು ದಾಟಿದರೆ ಉಪ್ಪನ್ನು ನೀರಿಗೆ ಹಾಕಿ ಸ್ನಾನ ಮಾಡಿ.
  • ರಸ್ತೆಯಲ್ಲಿ ನಿಂಬೆ-ಮೆಣಸಿನಕಾಯಿ ಅಥವಾ ಪೂಜಾ ಸಾಮಗ್ರಿಗಳನ್ನು ತಪ್ಪಾಗಿ ದಾಟಿದರೆ, ನಿಂತು ಮತ್ತೆ ಮತ್ತೆ ಹಿಂತಿರುಗಿ ನೋಡಬೇಡಿ. ಸುಮ್ಮನೆ ಅಲ್ಲಿಂದ ಹೊರಟು ಮನೆಗೆ ಹೋಗಿ.
  • ಯಾವುದಾದರೂ ವಸ್ತುವನ್ನು ದಾಟಿದ ಬಳಿಕ ಭಯ ಅಥವಾ ಆತಂಕ ಉಂಟಾದರೆ, ಮನೆಗೆ ಬಂದ ತಕ್ಷಣ ಸ್ವಲ್ಪ ಬೆಲ್ಲ ಅಥವಾ ಸಿಹಿ ತಿಂದು ಒಂದು ಲೋಟ ನೀರು ಕುಡಿಯಿರಿ.
  • ಹೊರಗೆ ಇಂತಹ ವಸ್ತುಗಳನ್ನು ದಾಟಿದರೆ, ಧರಿಸಿರುವ ಚಪ್ಪಲಿ ಅಥವಾ ಶೂಗಳನ್ನು ಮನೆಯೊಳಗೆ ತರಬೇಡಿ. ಅದನ್ನು ಚೆನ್ನಾಗಿ ತೊಳೆಯಿರಿ.

PREV
Read more Articles on
click me!

Recommended Stories

ಬಿರಿಯಾನಿ ಎಲೆ ಮೇಲೆ ಈ ನಂಬರ್ ಬರೆದರೆ ಅದೃಷ್ಟ ಖುಲಾಯಿಸುತ್ತಾ? ಜ್ಯೋತಿಷಿ ಹೇಳಿದ ಉಪಾಯ ಏನು?
ನವವಿವಾಹಿತ ದಂಪತಿ ಕೋಣೆಯಲ್ಲಿ ಇರಲೇಬೇಕಾದ 5 ವಸ್ತುಗಳು; ಮದ್ವೆಗೆ ಇವುಗಳನ್ನೇ ಕೊಡಿ